ಅಗ್ನಿಮಂತ್ರ ದೀಕ್ಷೆಯ
Category: ಶ್ರೀದೇವಿ
ಅಗ್ನಿಮಂತ್ರ ದೀಕ್ಷೆಯ ಕೊಡು ನಿನ್ನ ಸಂತಾನಕಿಂದು |
ಆಶೀರ್ವಾದ ಕವಚ ತೊಡಿಸು ದೈನ್ಯವಸನದಿಂ ಬಿಡಿಸು ||
ಕುದಿಸು ಎಮ್ಮ ಹೃದಯ ರುಧಿರ
ಒರಸು ಭಯದ ಅಶ್ರು ಜಲವ
ನಿಲಿಸು ಎಮ್ಮಜಗದ ಸಭೆಯೊಳ್
ನಿನ್ನ ಸುತ್ತ ತಾಯಿ ||
ನರರು ನಾವು ಕುರಿಗಳಲ್ತು
ನಿನ್ನ ಸುತರು ದೀನರೆಂತು
ವ್ಯರ್ಥ ಭೀತಿ ಏಕೆ ಇನ್ನು
ಮಿಥ್ಯವಲ್ತೆ ಈ ಲಜ್ಜೆ ||
ಬಾರಮ್ಮ ಬಾರಮ್ಮ ಬಾರೆಮ್ಮ ತಾಯಿ
ದಶಪ್ರಹರಣ ಧಾರಿಣೀ
ನಗುತ ಅಟ್ಟ ಅಟ್ಟಹಾಸದಿ
ದಿವಿಯ ಭುವಿಯ ತುಂಬಿ ನೀ
ಸಾಧಿಸಿ ನಿನ್ನ ಕಾರ್ಯವನ್ನು
ಭೇದ ಸ್ವಾರ್ಥ ಕಳೆವೆವು ||