ಜಾನಕಿರಾಮ ಜಾನಕಿರಾಮ
Category: ಶ್ರೀರಾಮ
Author: ವಿಜಯದಾಸ
ಜಾನಕಿರಾಮ ಜಾನಕಿರಾಮ
ಜಾನಕಿರಾಮ ಜಾನಕಿರಾಮ
ಭಕ್ತರ ನೋಡು ಗೀತವ ಪಾಡು
ನೃತ್ಯವನಾಡೊ ವರಗಳ ನೀಡೋ ||1||
ವಾರಿಧಿ ಬಂಧ ವಸುದೇವ ಕಂದ
ಸ್ವಾರಸ್ಯ ತಂದ ಸತ್ಕರುಣದಿಂದ ||2||
ಶಿರಿವಾಸ ಸಿರಿದೇವಿ ತೋಷ
ಶಿರಿ ವಿಜಯವಿಠ್ಠಲ ಉದ್ಧವ ಘೋಷ||3||