ನನ್ನಪರಾಧವು ಏನೆಲೆ ದೇವ

Category: ಶ್ರೀಕೃಷ್ಣ

Author: ಸ್ವಾಮಿ ಹರ್ಷಾನಂದ

ನನ್ನಪರಾಧವು ಏನೆಲೆ ದೇವ
ಎನ್ನನ್ನು ಕಾಯದೆ ಈಯುವೆ ನೋವ
ಭಾರವೆ ನಾನು ಗೋವರ್ಧನಗಿರಿ-
ಧಾರಿಯು ಅಲ್ಲವೆ ನೀ ಹೇ ಶ್ರೀಹರಿ ||

ಕೀರುತಿ ನಿನ್ನದು ಗಜೇಂದ್ರಮೋಕ್ಷದ
ಮಾರುತಿಯಾಶ್ರಯ ನಿನ್ನಯ ಪಾದ
ಪರಮಪುರುಷ ನೀ ಕೊಡು ತವ ಮೋದ
ಪರುಸಮಣಿಯೊಲು ಸರ್ವಾಭೇದ ||

ದೀನಬಂಧು ನೀ ದೇವದೇವ ನೀ
ಮಾನಘನನು ನೀ ಧರ್ಮಾತ್ಮನು ನೀ
ಜ್ಞಾನಧನರು ಗುಣಗಾನವ ಗೈಯಲು
ಎನ್ನನ್ನು ರಕ್ಷಿಸಲೇಕೀ ದಿಗಿಲು ||