ಡೀ ಡೀ ಅಡೋನೆ ರಂಗ ಡೀ ಡೀ ಆಡೋನೆ

Category: ಶ್ರೀಕೃಷ್ಣ

Author: ವಿಜಯದಾಸ

ಡೀ ಡೀ ಅಡೋನೆ ರಂಗ ಡೀ ಡೀ ಆಡೋನೆ |
ಓಡಿ ಓಡಿ ಬಂದು ತಲಿಗೆ ನೀ ಡೀ ಡೀ ಡೀ ಎಂದು

ಮರಕತ ನವರತ್ನ ವಜ್ರ |
ಹರಳು ತೆತ್ತಿಸಿದ ದ್ಯುಮಣಿ ||
ಕಿರಣ ಮುಕುಟ ಧರಿಸಿದ ಶಿರದಲಿ |
ಸರಿ ಸರಿ ಸರಿ ಸರಿ ಹಾಯಿದು ||1||

ಚಂದ್ರಶೇಖರ ಹಂಸವಾಹನ|
ಇಂದ್ರಾದ್ಯರಾಕಾಶದಲಿ ಧುಂ ಧುಂ ||
ಧುಂ ಧುಂ ದುಂದುಭಿ ನುಡಿಸೆ |
ಬಂದೆ ಇಕ್ಕೋ ಬಂದೆ ಬಂದೆನುತ ||2||

ಪಿಂತಿರುಗಿ ಪೋಗಿ ನೀನು |
ಅಂತರಿಸಿ ದೂರದಿಂದ ||
ನಿಂತು ವಿಜಯವಿಠ್ಠಲರೇಯಾ
ಇತ್ತಿಂ ತ್ತಿಂ ತ್ತಿಂ ತ್ತಿಂ ತ್ತಿಂ ತ್ತೆನುತಲಿ ||3||