ತಕ್ಕೋ ಗಂಟ ನಿನ್ನಾಟವ ತಿಳಿಸುವೆ
Category: ಶ್ರೀಕೃಷ್ಣ
Author: ವಿಜಯದಾಸ
ತಕ್ಕೋ ಗಂಟ ನಿನ್ನಾಟವ ತಿಳಿಸುವೆ
ಸಖಿಯರ ಕೂಡಿದಂತೆಲ್ಲೊ
ಠಕ್ಕುಬಿಕ್ಕಿನ ಮಾತುಗಳಾಡಲು
ಯುಕುತಿಯ ನಾ ಕೇಳೆನೆಲವೊ
ಮದಗಜಮನೇರ ಹೆದರಿಸಿ ಬೆದರಿಸಿ
ಅಧರವ ಸವಿದಂತಲ್ಲೊ
ಸುದತಿಯರೆಲ್ಲರ ಅಂಜಿಸಿ ವಂಚಿಸಿ
ದಧಿ ಘೃತ ಸವಿದಂತಲ್ಲೋ ||1||
ಕ್ಷೋಣಿಯೊಳೆಲ್ಲಿಗೆ ಹೋದರು ಎನ್ನಯ
ವೀಣೆಯ ಹೊರಬೇಕಲ್ಲೊ
ಗಾಣದೆತ್ತಿನ ಪರಿಯಲಿ ತಿರುಗುತ
ತ್ರಾಣ ತಪ್ಪಲು ಬಿಡೆನಲ್ಲೊ ||2||
ಸಣ್ಣಾಮಾತುಗಳಾಡಲು ಕೇಳುತ
ಚಿಣ್ಣನಂತಿರಬೇಕಲ್ಲೊ
ಘನ್ನ ಮಹಿಮ ಶ್ರೀ ವಿಜಯವಿಠ್ಠಲ
ಇನ್ನೆಂದಿಗೂ ಬಿಡೆನಲ್ಲೊ ||3||