ತುತ್ತನ್ನವ ನಮಗಿಂದು ನೀಡಿರಮ್ಮಾ

Category: ಶ್ರೀಕೃಷ್ಣ

Author: ವಿಜಯದಾಸ

ತುತ್ತನ್ನವ ನಮಗಿಂದು ನೀಡಿರಮ್ಮಾ ನಾನು
ಹತ್ತು ಸಾರೆ ಬಾರದಲೆ ತೊಲಗೆನಮ್ಮ

ನಿರಾಧಾರಾದಿ ನಿದ್ರೆ ಬಾರದಮ್ಮ ವಿ
ಚಾರಿಸು ತಾಯಿ ಪಾಲುವಲ್ಲೆನಮ್ಮ
ಧಾರುಣಿ ಸಂಬಂಧ ಎನಗಾಗದಮ್ಮ ಇದಕ್ಕೆ
ಸಾರಿ ಸಾರಿಗೆ ಬಾಯಿ ತೆರೆವೆನಮ್ಮ ||1||

ದೇಹಿ ಎಂಬೊದೆನ್ನ ಜಾತಿಧರ್ಮವಮ್ಮ ನಾನು
ದ್ರೋಹಿಗಳಿಗೆ ಕರ ಚಾಚೆನಮ್ಮ
ಆಹಾರಕ್ಕೆ ಬಲುದಿನ ಮೀರಿತಮ್ಮ ಸಂ
ದೇಹವಿಲ್ಲದೆ ನಾರೇರು ಬಡಿಸಲಮ್ಮ ||2||

ಇದೇ ಕೇಳಿದೆನು ಇನ್ನು ಮೌನವಮ್ಮ ಬಲು
ಸದಮಲ e್ಞನಿಗಳಿಗೆ ಪ್ರೀತಿಯಮ್ಮ
ಮಧುಹರಿ ವಿಜಯವಿಠ್ಠಲ ಪೂರ್ಣನಮ್ಮ ಸರ್ವರ
ಹೃದಯದೊಳಗಾನಂದವಾಸನಮ್ಮ ||3||