ದೇವಿ ಕಾರುಣ್ಯದಿಂದ ಬಂದು ಎಂದೆಂದು
Category: ಶ್ರೀಮಹಾಲಕ್ಷ್ಮಿ
Author: ವಿಜಯದಾಸ
ದೇವಿ ಕಾರುಣ್ಯದಿಂದ ಬಂದು ಎಂದೆಂದು
ಬಿಡದೆಂದು ದಯದಿಂದ ಪಾಲಿಸಿ ನಿಂದು
ಕಮಲಲೋಚನೆ ಸಾಮಜಯಾನೆ ಶಶಾಂಕ ವದನೆ
ವಿಮಲಾಬ್ಜ ಸದನೆ ಕೋಕಿಲ ಗಾನೆ ಆನಂದಪೂರ್ಣೆ
ನಮೋ ನಮೋ ರಮೆ ಉತ್ತಮೆ ಅನುಪಮೆ
ಶಮೆಕ್ಷಮೆ ಹರಿಗಸಮೆ ಸತತಾಗಮೆ ಗಗನಿಜಿತ
ಯಮೆ ಪರಮೇಶ್ವರಿ ಅ ಉಮೆ ಈ ಪರಾಕ್ರಮೆ||1||
ಲೋಕ ತರುವಾತ ತನಯವಾಕು ಇವು ಮೂರು ಬೇಕು
ಬೇಕೆಂದು ತುತಿಸಿದೆ ಪರಾಕು ಸಂತಾಪ ನೂಕು
ಲೋಕ ಜನನಿಯೆ ವೈದೀಕ ಪ್ರಾರ್ಥನೆ ಇದು
ನೀ ಕೇಳು ಕರುಣದಿ ಸಾಕು ಸಕಲ ತನುಪ್ರಾಕು ಕುರ್ಮದಿ ಬಂದ
ಶೋಕ ಓಡಿಸಿ ಎನ್ನ ಸಾಕು ನೀ ಮನಸು ಹಾಕು||2||
ರಂಗನ ಅರ್ಧಾಂಗಿ ನೀ ರನ್ನೆ ಕ್ಷೀರಾಬ್ದಿ ಕನ್ಯೆ
ಮಂಗಳಾದೇವಿ ಭಾಗ್ಯ ಸಂಪನ್ನೆ ಭಕ್ತ ಸಂಪನ್ನೆ
ತುಂಗ ಗುಣಾಬ್ಧೆ ತರಂಗಳೆ ತರುಣ ಪ್ರಕಾಶಿಸು
ಮಂಗಳಪ್ರದೆ ಭುಜಂಗ ಶಯನ ಸಿರಿ ವಿಜಯವಿಠ್ಠಲನ್ನ ವಕ್ಷಸಾರಿದ ಸಾಕ್ಷಾದ್ದೇವಿ ||3||