ನಂಬರು ನೆಚ್ಚರು

Category: ಶ್ರೀಶಿವ

Author: ಬಸವಣ್ಣ

ನಂಬರು ನೆಚ್ಚರು ಬರಿದೇ ಕರೆವರು
ನಂಬಲರಿಯದೆ ಲೋಕದ ಮನುಜರು
ನಂಬಿ ಕರೆದೊಡೆ ಓ ಎನ್ನನೇ ಶಿವ ||

ನಂಬದೆ ನೆಚ್ಚದೆ ಬರಿದೇ ಕರೆವರ
ಕೊಂಬೆ ಮೆಚ್ಚಕೂಡದೆಂದ ಕೂಡಲಸಂಗಮದೇವ ||