ನಮೋ ನಮೋ ನಾರಾಯಣ ನಮೋ
Category: ಶ್ರೀಕೃಷ್ಣ
Author: ವಿಜಯದಾಸ
ನಮೋ ನಮೋ ನಾರಾಯಣ ನಮೋ ಶ್ರುತಿ ನಾರಾಯಣ
ನಮೋ ಬಾದರಾಯಣ ನರನ ಪ್ರಾಣ
ಶಿವನ ಮೋದದಲಿ ಪಡೆದೆ ಶಿವರೂಪದಲಿ ನಿಂದೆ
ಶಿವನೊಳಗೆ ಏರಿದೆ ಶಿವನಿಗೊಲಿದೆ
ಶಿವಗೆ ನೀ ಮಗನಾದೆ ಶಿವ ತಾತನೆನೆಸಿದೆ
ಶಿವನ ಮಗನಾ ಪಡೆದೆ ಶಿವನ ಕಾಯ್ದೆ||1||
ಶಿವಗೆ ಸಹಾಯಕನಾದೆ ಶಿವನ ಕಂಗಡಿಸಿದೆ
ಶಿವನ ಧನುವನು ಮುರಿದೆ ಶಿವನೊಲಿಸಿದೆ
ಶಿವನ ಜಡ ಮಾಡಿದೆ
ಶಿವನ ಒಡನೆ ಬಂದೆ ಶಿವಮುನಿಗೆ ಉಣಿಸಿದೇ ಕೇಶವನೆನಿಸಿದೇ ||2||
ಶಿವನ ಜಡೆಯೊಳಗಿದ್ದ ಶಿವಗಂಗೆಯ ಪೆತ್ತೆ
ಶಿವನ ಕೂಡಲಿ ಕಾದಿದವನ ಭಾವ
ಶಿವ ಭಕ್ತನ್ನ ನಿನ್ನವನಿಂದ ಕೊಲ್ಲಿಸಿದೆ
ಶಿವನ ಶೈಲವನೆತ್ತಿದವನ ವೈರಿ||3||
ಶಿವ ನುಂಗಿದದ ನುಂಗಿದವನ ಒಡನಾಡುವ
ಶಿವ ಪರಾಶಿವ ನಿನ್ನ ಶಿವ ಬಲ್ಲನೇ
ಶಿವ ಕೊಳದವರ ಉದ್ಭವ ಮಾಡುವೆನೆಂದು
ಯವೆ ಇಡುವನಿತರೊಳಗೆ ಧವಳ ಹಾಸಾ||4||
ಶಿವನ ಮೇಲಿದ್ದ ಸಹಭವೆ ರಮಣ ಸರ್ವದಾ
ಶಿವನೊಳಗಿಳಿದ ಶಿಷ್ಯನಿವ ಹರಾತೀ
ಶಿವ ಭೂಷಣ ತಲ್ಪ ಶಿವ ಸಮಾನಿಕ ರೂಢ
ಶಿವನ ಮನೆ ತೊಲಗಿಸುವ ಶಿವ ಬಾಂಧವಾ ||5||
ಶಿವನ ಧೊರಿಯೆ ಜ್ಞಾನ ಶಿವ ಹಚ್ಚುವದೆ ಕೊಡು
ಶಿವಮಣಿ ಎನಿಸುವ ಸ್ತವ ಪ್ರಿಯನೇ
ಶಿವನು ವಾಹನ ವೈರ ಶಿರವ ತರಿಸಿದೆ ದೇವ
ಶಿವ ಪ್ರತಿಷ್ಠಿಸಿದೆ ಶಿವಗೆ ಕಾಣಿಸದಿಪ್ಪೆ||6||
ಶಿವನ ಸೋಲಿಸಿದವನ ಜವಗೆಡಿಸಿದೆ
ಶಿವನು ಕುದರಿಯ ಹೆರವ
ಅವನು ಕಾಯಿದ ಗೋವ
ಶಿವನವತಾರ ಶಸ್ತ್ರವನು ಹಳಿದೆ ||7||
ಶಿವನಧರ್ನಾಗಿ ದಾನವನು ಕೊಂದ ಮಹಿಮಾ
ಶಿವಋಷಿ ಪೇಳಿದ ಯುವತಿ ರಮಣಾ
ಶಿವನ ವೀರ್ಯವ ಧರಿಸಿದವನ ಮುಖದಲಿ ಉಂಬ
ಅವರ ಬೆಂಬಲವೇ ಯಾದವಕುಲೇಶಾ ||8||
ಶಿವಗೆ ತ್ವಂಚ ಬಾಹುಯೆಂದು ಪೇಳಿ ಮೋಹ
ದಿವಿಚಾರಿಗಳ ತಮಸಿಗೆ ಹಾಕುವೆ
ಶಿವಮೂರುತಿ ನಮ್ಮ ವಿಜಯವಿಠ್ಠಲರೇಯ
ಶಿವನಾಳು ಮಾಡಿ ಆಳುವ ದೈವವೇ||9||