ನಿನ್ನನೆ ನಂಬಿದೆ ಅನ್ಯರೊಬ್ಬರ ಕಾಣೆ ಮಧ್ವರಾಯಾ

Category: ಶ್ರೀಮಧ್ವಾಚಾರ್ಯ

Author: ವಿಜಯದಾಸ

ನಿನ್ನನೆ ನಂಬಿದೆ ಅನ್ಯರೊಬ್ಬರ ಕಾಣೆ | ಮಧ್ವರಾಯಾ
ನಿಮ್ಮ ಸಿದ್ಧಾಂತದಿ ಮನವ ನಿಲ್ಲಿಸಯ್ಯ | ಮಧ್ವರಾಯಾ

ಪತಿತ ಸಂಕರ ಪುಟ್ಟಿ ಮತವೆಲ್ಲ ಕೆಡಿಸಲು || ಮಧ್ವರಾಯಾ ||
ಗತಿಯ ಕಲ್ಪಿಸಿ ಸಜ್ಜನರ ತತಿಗಳ ಕಾಯಿ || ಮಧ್ವರಾಯಾ ||1||

ತಂದೆ ತಾಯಿ ಬಂಧು ಬಳಗವೆಲ್ಲವು ನೀನೆ | ಮಧ್ವರಾಯಾ |
ಎಂದೆಂದಿಗು ನಿಮ್ಮ ಪೋದಿರುವಂತೆ ಮಾಡೈ | ಮಧ್ವರಾಯಾ ||2||

ಬಾಲಕೃಷ್ಣನ ಸೇವೆ ಮೇಲಾಗಿ ಮಾಡುವ | ಮಧ್ವರಾಯಾ |
ಮೂಲ ಮೂವತ್ತೇಳು ಮೇಲು ಗ್ರಂಥಗಳಿತ್ತೆ | ಮಧ್ವರಾಯಾ ||3||

ಶ್ರೀನಿಧಿ ಕೃಷ್ಣನೆ ಜಗಕೆಲ್ಲ ದೊರೆಯೆಂಬ | ಮಧ್ವರಾಯಾ |
ಆನಂದ ಮುನಿಯೆಂದು ನೀನು
ಹೆಸರು ಪೊತ್ತೆ | ಮಧ್ವರಾಯಾ ||4||

ಅಜಪದಕೆ ಬಂದು ಅಖಿಲರ ಪಾಲಿಪ | ಮಧ್ವರಾಯಾ |
ವಿಜಯಸಾರಥಿ ಕೃಷ್ಣ ವಿಜಯವಿಠ್ಠಲಪ್ರಿಯ | ಮಧ್ವರಾಯಾ ||5||