ಅಂತರತಮ ನೀ ಗುರು

Category: ಶ್ರೀಗುರು

Author: ಕುವೆಂಪು

ಅಂತರತಮ ನೀ ಗುರು
ಹೇ ಆತ್ಮತಮೋಹಾರಿ ||

ಜಟಿಲಕುಟಿಲತಮ ಅಂತರಂಗ ಬಹು
ಭಾವವಿಪಿನ ಸಂಚಾರಿ ||

ಜನುಮ ಜನುಮ ಶತಕೋಟಿ ಸಂಸ್ಕಾರ
ಪರಮ ಚರಮ ಸಂಸ್ಕಾರಿ |

ಪಾಪಪುಣ್ಯ ನಾನಾ ಲಲಿತ ರುದ್ರಲೀಲಾ
ರೂಪಅರೂಪ ವಿಹಾರಿ |