ನಿರಂಜನ ಹರಿಚಿದ್ಘನ

Category: ಪರಬ್ರಹ್ಮ

Author: ವಚನವೇದ

ನಿರಂಜನ ಹರಿಚಿದ್ಘನ ಮೂರುತಿಯನು ನೆನೆಯೊ
ನಿರಂತರ - ಮೋಹನಮೂರುತಿಯನು ನೆನೆಯೊ ||

ಅನುಪಮತೇಜನ ಸುಂದರರೂಪನ
ಭಕ್ತರ ಎದೆಯಲಿ ರಂಜಿಪನ |
ಕೋಟಿಚಂದ್ರಸಮ ಕಾಂತಿಯ ನಾಚಿಸಿ
ಮಿಂಚಿನಂತೆ ನಮ್ಮಎದೆಯೊಳು ರಂಜಿಸಿ ಮೋಹಿಪನ ||

ಹೃದಯಪದ್ಮದಲಿ ಪೂಜಿಸು ಆತನ
ಶಾಂತಮಾನಸದಿ ಜ್ಞಾನನಯನದಲಿ
ಅಪೂರ್ವದರ್ಶನ ಮೋಹನನ |
ಭಕ್ತಿಯೋಗದ ಆವೇಶದಿ ಮುಳುಗಿಪ
ಚಿದಾನಂದರಸ ಸಾಗರನ ||