ಪರಮ ಮಂಗಳ ಮೂರುತಿ

Category: ಶ್ರೀಕೃಷ್ಣ

Author: ವಿಜಯದಾಸ

ಪರಮ ಮಂಗಳ ಮೂರುತಿ ದಿವ್ಯಕೀರುತಿ |
ಧರೆಯೊಳಗಿದೆ ವಾರುಕಿ

ಕರುಣಾಪಯೋನಿಧಿಯೆ ಕರವ ಪಿಡಿದು ಎನ್ನ |
ಕರಣಶುದ್ಧನ ಮಾಡೊ ಕರವ ಮಸ್ತಕ ಬಾಗಿಪೆ ||1||

ರಾಘವೇಂದ್ರರ ಪಾದ ಲಾಘವ ಮರೆಯಲ್ಲಿ
ಶ್ಲಾಘನ ಮಾಡಿದ ಮಾಘಧರನ ಪ್ರಿಯ ||2||

ನಿರುತ ಮಂತ್ರಾಲಯ ಪುರವಾಸಾ ಅಘನಾಶಾ|
ಸಿರಿ ವಿಜಯವಿಠ್ಠಲನ ಚರಣ ಭಜಿಪ ಗುರುವೆ ||3||