ಪಾಲಿಸು ಅವಾಂತರೇಶಾ ಪಾವನ ಕೋಶಾ
Category: ಶ್ರೀಕೃಷ್ಣ
Author: ವಿಜಯದಾಸ
ಪಾಲಿಸು ಅವಾಂತರೇಶಾ ಪಾವನ ಕೋಶಾ
ಪಾಲಾಬ್ದಿ ಶಯನನ ದಾಸಾ
ಕಾಲ ಜನಕ ವಿಶಾಲಮಹಿಮಾರೈಯಿ
ಲೋಲಾ ಜೀವೋತ್ತಮ ಕಾಲಕಾಲಕೆ ಎನ್ನ
ಪುಣ್ಯಗಾತುರ ಮಾರುತಾ ಪುಂಜಿತ ಜೀವಾ
ಗಣ್ಯರಹಿತ ಗುಣಜಾತಾ
ಮನ್ಯುದಾನವ ಕುಲಘಾತಾ ಮಹಾತತ್ವ ದಾತಾ
ಸನ್ನ್ಯಾಯಮಣಿ ಶ್ರುತಿಗೀತಾ
ಧನ್ಯನ ಮಾಡೊ ಅನ್ಯನೇನೊ ನಾನು ಕಾ
ರುಣ್ಯದಿ ದುರಿತಾರಣ್ಯ ಮನ್ಮಥ ಲಾ
ವಣ್ಯ ಸರ್ವದಾತಾ
ಗುಣ್ಯ ಮನದಾ ಕಾರ್ಪಣ್ಯವ ಓಡಿಸಿ ||1||
ದ್ವಿತೀಯ ನಿರ್ಜರವರೇಣ್ಯ ದೀನನುಗಣ್ಯ
ದಿತಿಜಾವಳಿಗೆ ಕಾಠಿಣ್ಯ
ಸತತ ಅಪ್ರತಿರಾಜ್ಯನ್ಯಾಸ ಚರಾಚರಮಾನ್ಯಾ
ತುತಿಸುವೆ ಕೇಳು ದೈನ್ಯ
ಗತಿ ನೀನೆ ಕ್ಷಿತಿಯೊಳಗಿತರರ ಕಾಣೆನೊ
ಸತಿಪತಿ ಮಿಗಿಲಾದ ತುತುವೇಶ ತತಿಗಳ
ಜಿತ ಸದ್ಗುರು ಭಾರಿತ ಪ್ರತಿಪಾದ್ಯ ಮಾರುತಿ
ಮತಿಯಲಿ ನಿನ್ನ ಮತದಲಿ ಪೊಂದಿಸಿ ||2||
ವಿಕಸಿತ ಸದನಾ e್ಞÁನ ವಿಶೇಷ ಧ್ಯಾನಾ
ಅಖಿಳ ವಿಚಾರ ನಿದಾನಾ
ಅಕಳಂಕವಾದ ಬಹುಮಾನಾ ಅಮೃತಪ್ರಾಣಾ
ಸಕಲಕ್ಕು ನೀನೇ ಪವಮಾನಾ
ಸುಖಸಾಗರ ಸುರನಿಕರವಿನುತ ಮಹಾ
ಭಕುತ ಭವಾಬ್ಧಿತಾರಕ ವಿಷಭಂಜನ
ಲಕುಮಿವಲ್ಲಭ ನಮ್ಮ ವಿಜಯವಿಠ್ಠಲನ್ನ
ನಖ ಕೊನೆ ಪೊಗಳುವ ಉಕುತಿ ನೀಡಿಂದು ||3||