ಪಾವನಕಾಯ ರಾಘವೇಂದ್ರ
Category: ಶ್ರೀಗುರು ರಾಘವೇಂದ್ರ
Author: ವಿಜಯದಾಸ
ಪಾವನಕಾಯ ರಾಘವೇಂದ್ರ
ರಾಘವೇಂದ್ರ ದುರಿತ ಘೋರ ಪರಿಹಾರ |
ರಾಘವೇಶನ ಪಾದ |
ಮೇಘನುಣಿಪ ಗುರು ||1||
ಶರಣು ಹೊಕ್ಕ್ಕೆನು ಹೊಕ್ಕೆನು ಯಿಂದು |
ಕರುಣ ಕರುಣ ಪೋಲುವ ಚರಣ |
ಸ್ಮರಣೆ ಪಾಲಿಸುವುದು | ಕರುಣದಿಂದ ಮಹಿಮ ಗುರು||2||
ಸಿರಿ ವಿಜಯವಿಠಲ ಪರದೈವವುಯೆಂದು |
ಸ್ಥಿರವಾಗಿ ಸ್ಥಾಪಿಸಿ ಪೊರೆದ ನಿರ್ಮಲ ಗುರು ||3||