ಪಾಹಿ ಮೋಹನ ವಿಠಲ

Category: ಶ್ರೀಕೃಷ್ಣ

Author: ವಿಜಯದಾಸ

ಪಾಹಿ ಮೋಹನ ವಿಠಲ ಪರಮಕರುಣಾಜಲಧಿ
ಮಹದಾದಿ ದೇವ ವಂದ್ಯ |
ಮೋಹಪಾಶವ ಬಿಡಿಸಿ ನಂಬಿದವನಿಗೆ ಒಲಿದು
ರಹಸ್ಯಮತಿ ಕೊಡುವುದು ಸ್ವಾಮಿ

ನೀನಿತ್ತ ಮಾತುಗಳು ಪೊಳ್ಳಾಗಬಲ್ಲವೆ
ಅನಂತ ಜನುಮವಾಗೆ
ಆನೊಬ್ಬನೆನ್ನದಿರು ಕೀರ್ತಿಸುವ ನರನೆಂದು
e್ಞÁನಿಗಳಿಗರಿವಾಗಿದೆ
ಏನಯ್ಯ ನಿನ್ನಂಘ್ರಿ ಭಜಿಸದಲೆ ಇರುತಿಪ್ಪ
ಮಾನವನ ಕ್ಲೇಶಕೆಣಿಯೆ
ಆನಂದ ನಂದನನೆ ತೃಣವ ಪಿಡಿದು ರುತುನ
ವನು ಮಾಡಿ ತೋರುವ ಸ್ವಾಮಿ ||1||

ನಿನ್ನಧೀನ ಕರ್ಮಸ್ವಭಾವ ಮೊದಲಾಗಿ
ಅನ್ಯಥಾ ಯಲ್ಲಿ ಕಾಣೆ
ಮನ್ನಿಪುದು ಮುದದಿಂದ ಮುಂದನೆನ್ನದೆ ಎನ್ನ
ಬಿನ್ನಪವ ಬರಿದೆನಿಸದೆ
ಅನ್ಯನಿವನಲ್ಲವೊ ಎನ್ನನ್ನೆ ಪೊಂದಿದ
ನಿನ್ನ ದಾಸನ ದಾಸನು
ಉನ್ನಂತ ಗುಣವಿತ್ತು ಉರುಕಾಲ ಒಲಿದು ಪ್ರ
ಸನ್ನನಾಗೋ ಪಾವನ್ನರನ್ನ ||2||

ನರರಿಗೆ ಸಾಧನ ಸತ್ಕೀರ್ತನೆ ಎಂದು
ಪರಮೇಷ್ಠಿ ಒರೆದನಿದಕೊ
ಪರಿಪರಿ ಬಗೆಯಿಂದ ಕರ್ಮಗಳ ಮಾಡಿದರೆ
ದುರಿತ ಬೆಮ್ಮೊಗವಾಗವು
ಪಿರಿದಾಗಿ ಬೇಡಿದೆನೊ ವಿಜಯವಿಠ್ಠಲ ನಿನ್ನ
ಶರಣರೊಳಗಿಟ್ಟು ಕಾಪಾಡು
ಸ್ಥಿರವಾಗಿ ಅಂಕಿತವ ಪ್ರೇರಿಸಿ ಕೊಡಿಸಿದ್ದು ಧರೆಯೊಳಗೆ
ಪರಿಪೂರ್ಣವಾಗಿ ಇರಲಿ ಸ್ವಾಮಿ||3||