ನೀನೆಲ್ಲಿಗೆ ಹೋಗಬೇಡಯ್ಯ

Category: ಶ್ರೀಹನುಮಂತ

Author: ಆಂಜನಪ್ಪ ಸ್ವಾಮಿ

ನೀನೆಲ್ಲಿಗೆ ಹೋಗಬೇಡಯ್ಯ
ಓ ಆಂಜನೇಯ ||

ನೀನೆಲ್ಲಿಗೆ ಹೋಗಬೇಡ
ನನ್ನನ್ನು ಬಿಡಬೇಡ |
ನೀನಿದ್ದ ಗೃಹದಲ್ಲಿ
ನನ್ನನ್ನು ಇರಿಸಯ್ಯ ||

ಅಷ್ಟಾಂಗಯೋಗವ ಮಾಡಿ
ಆರು ಬೀದಿ ತಿರುಗಿ ನೋಡಿ |
ಕಷ್ಟಪಡುವುದು ಯಾಕೊ
ಸೃಷ್ಟಿಶೀಲ ರೂಪದೇವ ||

ಸಾಮಾನ್ಯವಾದದ್ದಲ್ಲ
ಸಾಮುದ್ರ ಸಂಸಾರವು |
ಸಾಧಿಸಿ ಸಾಧಿಸಿ ಪ್ರಜರು
ಸಾಂಖ್ಯಯೋಗ ತಿಳಿಯಲಿಲ್ಲ||

ಧರೆಯೊಳು ಘಟ್ಟಿಹಳ್ಳಿಪುರವು
ಭಕ್ತ ಆಂಜನೇಯ ಸ್ವಾಮಿ |
ನೀನು ನಾನು ಒಂದಾಗಿ
ಹೋಗೋಣ ತಿರುಪತಿಗೆ ||