ಬಣ್ಣಿಸಲಾರೆ ನಿಂದು ಈ ಮೂರುತಿಯ
Category: ಶ್ರೀಕೃಷ್ಣ
Author: ವಿಜಯದಾಸ
ಬಣ್ಣಿಸಲಾರೆ ನಿಂದು ಈ ಮೂರುತಿಯ ಬಣ್ಣಿಸಲಾರೆ ನಿಂದು
ಕನ್ಯಾರೂಪವ ತಾಳಿದ ಚನ್ನಿಗ ಕೃಷ್ಣರಾಯನಾ
ದಾನವರ ಮರಳು ಮಾಡಿ ಮಾಣದೆ ಸುಧೆಯನೆರೆದು
ಆ ನಿರ್ಜರರ ಪಾಲಿಸಿದ ಶ್ರೀ ನಾರಾಯಣಿ ವೇಷವಾ ||1||
ಆರಾರು ಸಾವಿರ ಸಕಲ ಶರೀರದ ಎಡಕೆ ಇಪ್ಪ
ಸಾರಸುಂದರವಾಗಿದ್ದ ನಾರಿ ರೂಪಗಳು ಇದೊ ||2||
ಭೂತಳದೊಳಗೆ ಜನಕೆ ಮಾತೆಯಾಗಿ ಕಾವುತಿಪ್ಪ
ಜಾತರಹಿತ ವಿಜಯವಿಠ್ಠಲ ಶ್ರೀ ತರಣಿಯಾಳಿದ ಪೆಣ್ಣಿನ ||3||