ಭೂರಮಣನೆ ಕಾಯೋ ನಿತ್ಯ
Category: ಶ್ರೀಕೃಷ್ಣ
Author: ವಿಜಯದಾಸ
ಭೂರಮಣನೆ ಕಾಯೋ ನಿತ್ಯ
ಸಂಸಾರವೆ ಸುಖವೆಂದು ಹಾರಯಿಸಿ ಬಾಳುವಾ |
ನರನ ಉದ್ಧಾರ ಮಾಡುವುದು
ಕಂಗಳಿಂದಲಿ ಪರರ ಮನೆಯ ಅಂಗನೆಯರ ನೋಡಿ
ಅಂಗಸಂಗವ ಬಯಸಿ ಪಾಪಕ್ಕೆ ಹಿಂಗದೆ ಗುರಿಯಾದೆ ||1||
ಜಿಹ್ವೆಯನು ಪಿಡಿದು ನಿಲಿಸದೆ ವಿಹ್ವಲನಾಗಿ ಬಹುರಸ
ಸಂಹ್ವತಿಯ ಮೆದ್ದು ಪುಣ್ಯದಾ ಗಹ್ವರವು ಮರಿಯದೆ ||2||
ನಾಸಿಕಕೊನೆಯಿಂದ ಅನರ್ಪಿತ ವಾಸನೆ ಕೈಕೊಂಡು
ಲೇಸಾಗಿ ಮನವುಬ್ಬಿ ನಲಿವುತ ದೇಶದೊಳಗೆ ಮೆರೆದೆ ||3||
ಮುಪ್ಪಾಗುವತನಕ ಸುಖದಲ್ಲಿ ಅಪ್ಪಿದೆ ನಾರಿಯರ
ಒಪ್ಪಿದ ಧರ್ಮಗಳ ಖಳರಿಗೆ ಒಪ್ಪಿಸಿದೆನೊ ಹರಿಯೇ ||4||
ದುಷ್ಟರಾಡುವ ವಾಕ್ಯ ಕೇಳುತ್ತ ಅಟ್ಟಹಾಸವ ಮಾಡಿ
ಕೆಟ್ಟು ಪೋಗುವೆನೆಯ್ಯಾ ವಿಜಯವಿಠ್ಠಲ ನೀನೆ ||5||