ಮಂಗಳಂ ಮಹಾಗಂಗೆ
Category: ಶ್ರೀಗಂಗೆ
Author: ವಿಜಯದಾಸ
ಮಂಗಳಂ ಮಹಾಗಂಗೆ | ಭಕುತ ಮನೋಹಾರಿಗೆ |
ಮಂಗಳಂ ಬಲುದುರಿತ ಸಂಹಾರಿಗೆ |
ಮಂಗಳಂ ಪ್ರಯೋಗ ಕ್ಷೇತ್ರ ವಿಹಾರಿಗೆ
ಮಂಗಳಂ ಕುಸುಮ ಚಿತ್ರಹಾರಿಗೆ
ವೇಣಿಗೆ ನಿತ್ಯಕಲ್ಯಾಣಿಗೆ ಪಲ್ಲವ |
ಪಾಣಿಗೆ ಗಂಭೀರ ಗುಣಶ್ರೇಣಿಗೆ |
ತ್ರಾಣಿಗೆ ಕೋಕಿಲವಾಣಿಗೆ ಯಾದವನ |
ರಾಣಿಗೆ ಮಣಿಹೇಮ ಭೂಷಣೆಗೆ ||1||
ಖ್ಯಾತಿಗೆ ತ್ರಿಲೋಕ ಮಾತೆಗೆ ಯ |
ಮುನೆ ಸಂಘಾತಿಗೆ ಸರ್ವದಾ ಬಲುನೀತಿಗೆ |
ಜಾತಿಗೆ ತುಹಿನಗಿರಿದಾತೆಗೆ ಲಕುಮಿಯ |
ದೂತಿಗೆ ಅಮಿತ ಗುಣ ಪ್ರತಾಪಿಗೆ || ||2||
ಚನ್ನಿಗೆ ನಾರಿಕುಲರನ್ನಿಗೆ ಭಾಗ್ಯ ಸಂ |
ಪನ್ನಿಗೆ ಸಗರಕುಲ ಪಾವನ್ನಿಗೆ |
ಕಣ್ಣಿಗೆ ಪೊಳೆವ ಪ್ರಸನ್ನಿಗೆ ಸೀತಾ ಸು |
ವರ್ನಿಗೆ ವಿಜಯವಿಠ್ಠಲ ಕನ್ನಿಗೆ ||3||