ಮಧ್ವಮುನಿಯೇ ಎನ್ನ ಹೃತ್ಕುಮುದ ಚಂದ್ರ
Category: ಶ್ರೀಮಧ್ವಾಚಾರ್ಯ
Author: ವಿಜಯದಾಸ
ಮಧ್ವಮುನಿಯೇ ಎನ್ನ ಹೃತ್ಕುಮುದ ಚಂದ್ರ
ಅದ್ವೈತಮತಾರಣ್ಯ ದಹನ ಗುಣಸಾಂದ್ರ
ನೊಂದೆ ಎಂಭತ್ನಾಲ್ಕು ಲಕ್ಷಯೋನಿಗಳಲ್ಲಿ
ಒಂದೇ ಪ್ರಕಾರ ಸಂಚgಣೆಯಿಂದ
ಒಂದೊಂದು ಕರ್ಮಗಳನರಸಿ ನೋಡಲು ಅದ-
ರಿಂದ ಭವಾಬ್ಧಿಗೆ ಬಂದುಪಾಯವ ಕಾಣೆ ||1||
ನೀರು ಚಳಪಳಕಾಸಿ ಆರಲಿಟ್ಟು ಹೆಪ್ಪು
ನೀರಿನಿಂದಲಿ ಕೊಡಲು ಬಪ್ಪುದೇನೊ
ಮಾರುತೀ ನಿನ್ನ ಕೃಪೆ ಪಡೆಯದಲೆ ಉಳಿದವರ
ಕಾರುಣ್ಯವಾಗಲು ಮೋಕ್ಷಸಾಧನವಿಲ್ಲ||2||
ಹರಿಸಿರಿಗೆ ಎರಗುವ ಸತ್ವ ಶರೀರನೆ
ನಿರುತ ಎನ್ನೊಳಗಿಪ್ಪ ಮೂಲಗುರುವೆ
ನೆರೆ ನಂಬಿದೆನೊ ಸ್ವಾಮಿ ವಿಜಯವಿಠ್ಠಲರೇಯನ
ಚರಣದಲ್ಲಿರುವಂತೆ ಸಾಧ್ಯವಾಗಲಿ ಮನಸು ||3||