ನುಡಿ ಎಲೆ ಮನವೇ
Category: ಶ್ರೀರಾಮ
Author: ಸ್ವಾಮಿ ಹರ್ಷಾನಂದ
ನುಡಿ ಎಲೆ ಮನವೇ, ನಿಜವನರಿತು ನುಡಿ ||
ಧನದಿಂ ಸುಖವೋ ಧಾನ್ಯದಿ ಸುಖವೋ
ಜಾನಕೀನಾಥನ ನಾಮದಿ ಸುಖವೋ ||
ಷಡ್ರಸಭೋಜನ ಸುರುಚಿಯು ಸುಖವೋ
ಷಡ್ರಿಪುನಾಶದ ಶಾಂತಿಯು ಸುಖವೋ ||
ಭ್ರಮೆಯಿಂ ವಿಷಯದಿ ಮಜ್ಜನ ಸುಖವೋ
ರಾಮತೀರ್ಥದಲಿ ಸ್ನಾನವು ಸುಖವೋ ||
ಮಮತಾಬಂಧಿತ ನರಸ್ತುತಿ ಸುಖವೋ
ಸುಮತಿ ಭಕುತನ ಶಿವನುತಿ ಸುಖವೋ ||