ಮನ್ನಿ ಮನ್ನಿಗೆ ಉಣ್ಣ ಬಂದಾ

Category: ಶ್ರೀಕೃಷ್ಣ

Author: ವಿಜಯದಾಸ

ಮನ್ನಿ ಮನ್ನಿಗೆ ಉಣ್ಣ ಬಂದಾ |
ತನ್ನವರೊಳಗಿದ್ದ ಸರ್ವ ಸಾರಭೋಕ್ತಾ

ಭಕುತರಗೋಸುಗ ಭಕುತಿಯ ಕೈಕೊಂಡು
ಕರುಣಾಂಬುಧಿ ಇಂದು ||1||

ಭೂವದರೊಳಗಿದ್ದು ದೈತ್ಯರ ಗೆದ್ದಂತೆ |
ಆವಿಷ್ಣುವಾಗಿ ಮನ್ನಣೆಯ ಕೈಕೊಳುವಲಿ ||2||

ನಂಬಿದ ದಾಸರ್ಗೆ ಪ್ರಾರಬ್ಧ ಕರ್ಮವು |
ಉಂಬೋದು ಬಿಡದಂದು ತದಾಕಾರ ರೂಪದಿ3
ಅವರವರ ಯೋಗ್ಯತೆ ಫಲ ಕೊಡುವೆನೆಂದು |
ದಿವಿಜರ ಒಡಗೂಡಿ ದಿನ ಪ್ರತಿದಿನದಲ್ಲಿ ||4||

ತನ್ನ ಸಂಕಲ್ಪವು ಸಿದ್ಧಿ ಮಾಡುವೆನೆಂದು
ಘನ್ನತೆಯಲಿ ನಮ್ಮ ವಿಜಯವಿಠ್ಠಲಸ್ವಾಮಿ ||5||