ಮಾತು ಮನ್ನಿಸೊ ಪರಮಾತಮಾ ಮುದದಿಂದ

Category: ಶ್ರೀಕೃಷ್ಣ

Author: ವಿಜಯದಾಸ

ಮಾತು ಮನ್ನಿಸೊ ಪರಮಾತಮಾ ಮುದದಿಂದ
ಮಾತು ವೈದವನಲವ ಮಾತುರದೊಳು ಗೆದ್ದು
ಮಾತಿಯ ಸೆರೆ ಪ್ರೇಮಾತುರ ಭೇದಿಸಿದ
ಮಾತುರಪತಿ ಚಿನ್ಮಾತುರ ತೋರೋ

ಶುನಕ ಸೂಕರ ಘೂಕಾ ಮನಕಾಶಾ ಕಾಕಕಂಕಾ
ದನ ಕತ್ತೆ ಮೊದಲಾದ ಜನ ಕಲಿಯುಗದೀ
ತನಕೆ ಆದzಕಿನ್ನು ಮನಕಾನಂದವ ಕಾಣೆ
ದಿನ ದಿನ ಕಾಂಚನಾಶಿಯಿಂದ ಘನಕಾಮ ಬದ್ಧನಾದೆ
ಕನಕಾಂಬುಜ ಭವಜನಕ ಜಗತ್ಪತಿ ಜನ ಕಥೆಯಿಂದ ಭ
ವನಕತಿ ಮೋಹಿಸಿ ಧನಕವಿಯೆನಿಸಿದೆ
ವನಕವಿವರಗೆ ಮೋಹನ ಕಂಠ ಮಾಲಿಯೆ
ಎನ್ನ ಕಡೆ ಮೊಗವಾಗು ||1||

ಸನಕಾದಿ ವಂದ್ಯ ತ್ರಿಭುವನಕಾದಿ ಮೂಲವೆನಿಸಿ
ವನಕಾಯಿದ ಕಾರುಣ್ಯರತುನಕಾರ ಪೂರ್ಣನೀತಾ
ಘನಕಾಯ ಒಂದಾರೆ ಸಾಧನಕಾಧಾರವಾದೊ ಪಾ
ವನ ಕಾಲಾ ತೊರೆದು ಜೀವನ ಕಾದುಕೊಂಡೆನಯ್ಯಾ
ಇನಕರ ತೇಜಾ ತುಹಿನಕರ ಚರಣನೆ
ಬೆನಕಾನ ತತ್ವಾದಿ ಅನಕಳೆವ ರಾಮ ನನ ಕಾರಣಕೆ
ದರುಶನ ಕರುಣಿಸೋ ಲೋ
ಚನ ಕತ್ತಲೆ ನಾಶನ ಕರಿವರದಾ ||2||

ಜನಕಾ ವನಿಕಾ ನಾಭಾ ಕಾಣಿಸಿದೆ ಮುನಿ
ಜನಕಾಶ್ಚರ್ಯರಾಗೆ ವಾಗೆ ಅನನಕಾಮರಿ ತೂಗೆ ವಂ
ಚನೆ ಕಾಠಿಣ್ಯ ಪಾಪಕಾನನಕಾನಳನೆ ಜಾ
ವನ ಕಾಟ ಬಿಡಿಸಿ ಈಮ್ಮನ ಕಾದಂತಯ್ಯಾ
ನನಕೂಡ ಹಾಕು ದುಷ್ಟನದೊಟ್ಟಿ ಸ
ಜ್ಜನ ಕರ್ಮದಲಿ ಸೋಭನ ಕಡೆಯಲಿ ಇಡು
ದಿನಕರ ಕುಲಧ್ವಜ ವಿಜಯವಿಠ್ಠಲ ನೂತನ
ಕವನಕೆ ದಾಸನ ಕರವಿಡಿಯೊ ||3||