ಮಾಧವನ ನೋಡಿ ಸಂಪಾದಿಸಿದೆ
Category: ಶ್ರೀಕೃಷ್ಣ
Author: ವಿಜಯದಾಸ
ಮಾಧವನ ನೋಡಿ ಸಂಪಾದಿಸಿದೆ ಭಕುತಿಯನು |
ಆದರಪೂರ್ವಕದಿಂದಲಿ ಮಾಧುರ್ಯವಾದ ಮನ |
ಸಾಧುಗಳ ಸಂಗತಿ ಭೇದ ಪಂಚಕ ಪೂರ್ಣಬೋಧರ
ಮತವಿಡಿದು
ಮಡುವಿನೊಳು ಕರಿ ಮೊರೆ ಇಡಲು ಕೇಳುತ ನಕ್ರನ |
ಕಡಿದು ಕರುಣದಿಂದಲಿ ತಡಿಯದಲೆ ಜಡುಮತಿಯ |
ಬಿಡದೆ ಉದ್ಧರಿಸಿದ ಒಡೆಯ ಪುಣ್ಯನಿಧಿಗೆ
ಕಡು ಮೆಚ್ಚಿ ಬಂದವನ ||1||
ಮರಣಕಾಲದಿ ಭಯಂಕರವಾದ ಯಮನ ದೂ |
ತರನ ನೋಡಿ ಕರಿಯಲು |
ಪರಮ ವೇಗದಿಂದ ಪುರಕೆ ಕರಿಸಿದ
ಉಭಯ ಶರಧಿ ಮಧ್ಯದಲ್ಲಿ |
ಮೆರೆವ ಮಧುಸೂದನನ ||2||
e್ಞÁನ ಪಾಪಿಯ ಸ್ನಾನ ಆನಂದದಲಿ ಮಾಡಿ |
ಹೀನ ದೋಷಗಳ ಕಳೆದು |
e್ಞÁನವಧಿಕವಾದ ಗುರುಗಳ ಕೃಪೆಯಿಂದ |
ಶ್ರೀ ವಿಜಯವಿಠ್ಠಲ ಸೇತುವಾಸನಾ ||3||