ಮುಖ್ಯಪ್ರಾಣನೀತಾ ನಮಗೆ
Category: ಶ್ರೀಕೃಷ್ಣ
Author: ವಿಜಯದಾಸ
ಮುಖ್ಯಪ್ರಾಣನೀತಾ ನಮಗೆ |
ಮುಖ್ಯ ಪ್ರಾಣನೀತ ನಮಗೆ ಮೂಲ ಗುರುವಿತ ಸತತಾ |
ಸೌಖ್ಯವನು ಕರುಣಿಸಿ ನಮ್ಮ ಸಖ್ಯನಾಗಿ ಪೊರೆವನೀತಾ ಪ
ನಿಗಮವೇದ್ಯನೀತಾ ನಂಬಿಕೆಯನೀವ ಚರಣ |
ಯುಗಳ ಪೂಜಿಪಾ ದುರಿತ ರಾಗಗಳ ಕಳೆನೀತಾ |
ವಿಗಡ ವಿಷವನುಂಡನೀತಾ |
ಹಗಲ ವಲ್ಲಭನಲ್ಲಿ ಸಂಮೊಗದವನಾಗಿ | ಓದಿದನೀತಾ |
ಅಗಣಿತಾದವಿದ್ಯನೀತಾ ||1||
ಜಗವ ಪಾಲಕನೀತಾ ಚತುರ | ಯುಗದಿ ಬಲುದಿಟ್ಟನೀತಾ |
ಪೆಗಲಿಲಿ ಭೂಮಿ ಮಗಳ ಪತಿಯ | ಜಗಳದಲ್ಲಿ ಪೊತ್ತನೀತಾ |
ಹಗೆಯ ದುಶ್ಶಾಸನ್ನ ವಡಲ ಬಗೆದು ಮುಂದೆ ಚತುರ |
ಮೊಗದವನಾಗಿ ವಾನರ ಬಲವ |
ನಗವ ತಂದೆತ್ತಿದವನೀತಾ ||2||
ವರ ವೃಕೋದರನೀತಾ ಸಕಲ ಸುರರೊಳು ಬಲು ಪ್ರಬಲನೀತಾ |
ಕರೆದು ಕೊಡುವ ಚತುರ ವಿಧದ |
ಪರಮ ಮಂಗಳ ಪದದಿ ಭವದ |
ಶರಧಿ ಬತ್ತಿಪನೀತಾ | ಒಮ್ಮೆ ಸ್ಮರಿಸಿದಾಕ್ಷಣ ಬರುವನೀತಾ |
ಮರುತಾವತಾರನೀತಾ ತನ್ನ |
ಶರಣ ಜನರ ಪೊರೆವನೀತಾ ||3||
ಅಸಮ ಸಾಹಸನೀತಾ ಭಕ್ತರ ವಶವಾಗಿ ವೊಳಗಿಪ್ಪನೀತಾ |
ವಸುಧಿ ಜನರ ಪುಣ್ಯದಂತೆ ಸಮ ವಿಷಮ
ನೋಡಿ ಪೊರೆವನೀತಾ |
ಅಸುರ ಲಿಂಗಭಂಗವ ಮಾಡಿ |
ಬೆಸನೆ ಮತವ ಕಟ್ಟುವನೀತಾ |
ಹಸನಾದ ಮುನಿ ಈ ರಕ್ಕಸರೆದೆಯ ಶೂಲನೀತಾ ||4||
e್ಞÁನ ಪೂರ್ಣನೀತಾ ಶ್ರೀಮದಾನಂದತೀರಥನೀತಾ |
ದಾನ ಧರ್ಮ ಪ್ರೇರಕನೀತಾ |
ಪ್ರಾಣನೀತಾ ನಾಶವಿಲ್ಲದೆ ನಾನಾ ಮಹಿಮನೀತಾ |
ನಮಗೇನೇನು ಕೊಡುವನೀತಾ |
ಗಾನವಿಲೋಲ ವಿಜಯವಿಠ್ಠಲ ಧ್ಯಾನ ಮಾಳ್ಪನೀತಾ ||5||