ಯಚ್ಚತ್ತು ನಡಿ ಕಂಡ್ಯ ಮನವೇ
Category: ಶ್ರೀಕೃಷ್ಣ
Author: ವಿಜಯದಾಸ
ಯಚ್ಚತ್ತು ನಡಿ ಕಂಡ್ಯ ಮನವೇ ನಮ್ಮ
ಅಚ್ಯುತನಂಘ್ರಿಗಳನು ನೆನೆ ಮನವೇ ನೀ ನೆನೆ ಕಂಡ್ಯ ಮನವೇ
ಆಡದಿರಪವಾದಗಳನು ನೀನು
ಕೊಂಡಾಡದಿರು ಚಿಲ್ಲರೆ ದೈವಗಳನು
ಬೇಡಾಡದಿರುಭಯ ಸೌಖ್ಯಗಳನು ನೀ
ಮಾಡಿ ಕಂಡ್ಯ ದುರ್ಜನರ ಸ್ನೇಹವನ್ನು ಸಜ್ಜನರ ದ್ವೇಷವನು ||1||
ಹಾಳು ಹರಟಿಗ್ಹೋಗ ಬ್ಯಾಡ ಕಂಡ
ಕೂಳುಗಳನು ತಿಂದು ವಡಲ್ಹೊರಿಯ ಬೇಡ
ಕಾಲ ವೃಥಾ ಕಳಿಯ ಬ್ಯಾಡ ನಮ್ಮ |
ಪ್ರಾಲಬ್ಧ ಭೋಗಕ್ಕೆ ಮನಸೋಲ ಬ್ಯಾಡ,
ಶ್ರೀ ಹರಿ ದಯಮಾಡಾ ||2||
ನಾನು ಯೆಂಬುದು ಬಿಡು ಕಂಡ್ಯಾ ಎನ್ನ
ಮಾನಾಭಿಮಾನದ ಹರಿಯನ್ನು ಕಂಡ್ಯಾ
e್ಞÁನಿಗಳೊಡನಾಡು ಕಂಡ್ಯಾ ವಿಷಯ
ಜೇನೆಂದು ಮೆದ್ದರೆ ಅದು ವಿಷ ಕಂಡ್ಯಾ
ಬೀಳುವಿ ಯಮಕೊಂಡಾ ||3||
ಅನ್ಯಸ್ತ್ರೀಯರ ನೋಡಬ್ಯಾಡಾ ಹಿಂದೆ
ಮಣ್ಣು ಕೂಡಿರುವರೆಗೊ ಕೇಳೊ ಮೂಢಾ
ಅನ್ಯಶಾಸ್ತ್ರವನೋದ ಬ್ಯಾಡಾ ನಮ್ಮ
ಪೂರ್ಣಪ್ರಜ್ಞರ ಬೊಧ ತಿಳಿದುಕೊ ಗಾಢ,
ಮೈಮರೆದಿರ ಬ್ಯಾಡಾ||4||
ನರಜನ್ಮ ಬರುವೋದು ಕಷ್ಟ ಅಮ್ಮ
ಹಿರಿದು ನೋಡೆಲೋ ವಿಪ್ರತ್ವವು ಶ್ರೇಷ್ಠ
ಮರಳಿ ಬಾರದು ಉತ್ಕøಷ್ಟ ನಮ್ಮ
ಮಾರುತ ಮತವನೆ ಪೊಂದುವದೆ ದುರ್ಘಟ,
ಕೇಳೆಲವೋ ಮರ್ಕಟ ||5||
ಗೋವಿಪ್ರರ ಸೇವೆ ಮಾಡೋ ಸೋಹಂ
ಭಾವಗಳನು ಬಿಟ್ಟು ದಾಸತ್ವ ಕೂಡೋ
ಕೇವಲ ವೈರಾಗ್ಯ ಮಾಡೋ ಎಂಟು
ಝಾವಗಳಲಿ ಶ್ರೀ ಹರಿಯ ಕೊಂಡಾಡೊ,
ಲಜ್ಜೆಯನೀಡ್ಯಾಡೋ||6||
ಕಷ್ಟ ಪಡದೆ ಸುಖ ಬರದು ಕಂ
ಗೆಟ್ಟ ಮ್ಯಾಲಲ್ಲದೆ ಕಷ್ಟ ತಿಳಿಯದು
ದುಷ್ಟ ವಿಷಯದಾಶೆ ಜರಿದು ವಿಜಯ
ವಿಠಲನೆನ್ನದೆ ಮುಕ್ತಿಯು ಬರದೂ,
ಕೂಗೆಲವೊ ಬ್ಯಾದೆರದು ||7||