ವಂದಿಸು ವಂದಿಸು ಗುಣವ
Category: ಶ್ರೀಕೃಷ್ಣ
Author: ವಿಜಯದಾಸ
ವಂದಿಸು ವಂದಿಸು ಗುಣವ ಕೊಂಡಾಡಿ ಅರ
ವಿಂದನಾಭನ ಮೂರ್ತಿ ನೋಡಿ | ಹಾಹಾ | ಆ
ನಂದ ಸಿಂಧುವಿನೊಳು ಪೊಂದು ಒಂದೆ ಭಕ್ತಿಯಿಂದ
ಇಂದುವಿನಂದದಿಪ್ಪನಾ
ಓಂಕಾರ ಪ್ರತಿಪಾದ್ಯನೀತಾ ಅಕಳಂಕ ಅಪ್ರಾಕೃತನೀತಾ ಬಿರು
ದಾಂಕ ಅಖಂಡವ್ಯಾಪುತ ತನ್ನ ಸಂಕಲ್ಪಕ್ಕೆ
ಮೀರಾಜಾತಾ | ಹಾಹಾ|
ಪಂಕಜಸಖ ಕೋಟಿ ಸಂಕಾಶ ಸುರಗಣ
ಲಂಕಾರವಾಗಿಪ್ಪ ವೆಂಕಟರಮಣನ್ನ ವಂದಿಸು ||1||
ಪ್ರಳಯದಲ್ಲಿ ವಟಪತ್ರದಲ್ಲಿ ಮಲಗಿಪ್ಪ ಭುವನ ಪವಿತ್ರ ನಿತ್ಯ
ಬಲು ಲೀಲಾಚಿತ್ರ ವೈಚಿತ್ರ ಕರ್ಮ
ನೆಲೆಗೊಳಿಸುವ ಶ್ರೀ ಕಳತ್ರ || ಹಾಹಾ ||
ಪೊಳೆವ ಏಳು ಕೋಟಿ ನಿಲವು ಪರಿಮಿತಾ
ತಲುವರಿಯಾದ ವಿಮಲಜ್ಞಾನ ಪೂರ್ಣನ್ನ ವಂದಿಸು||2||
ನಿರ್ವಿಕಾರ ನಿರ್ಗುಣಾ ದೇವ ಓರ್ವನಹುದೊ
ಕಲ್ಯಾಣಾ ಮೂರ್ತಿ
ಸರ್ವರೊಳಗೆ ಬಲು ಜಾಣಾನಾಗಿ
ಸರ್ವದಾ ಚರಿಪ ಪ್ರವೀಣಾ ||ಹಾಹಾ ||
ಊರ್ವಿ ಭಾರಕರಾದ ಪೂರ್ವ ದೇವರುಗಳ
ಗರ್ವಹರನ ಒಂದು ದೂರ್ವಿಗೆ ಒಲಿವನ್ನ ವಂದಿಸು ||3||
ಕಾಲನಾಮಕ ಭಗವಂತಾ ವೇಗ ಪೇಳಿಸುವನು ಏಕಾಂತಾತತ್ತ್ವ
ಕೇಳು ಮನವೆ ನಿಶ್ಚಿಂತಾದಲ್ಲಿ ಹೇಳುವೆ ಮುಂದೆ
ವೃತ್ತಾಂತಾ | ಹಾಹಾ |
ಶ್ರೀಲಕುಮಿಗೆ ತಾನು ವಾಲಯ ಪ್ರೇರಿಸಿ
ಮೇಲುಪದಗಳಿಂದ ವಾಲಗಗೊಂಡನ್ನ ವಂದಿಸು ||4||
ಪುರುಷ ನಾಮಕ ನಾರಾಯಣಾ ತನ್ನ
ಶರಣರಿಗೆ ಪಂಚಪ್ರಾಣಾನಾಗಿ
ಪೊರೆವನು ಬಿಡದನುದಿನಾ ಇದೆ
ಸ್ಥಿರವಾಗಿ ತಿಳಕೊಂಡು ಧ್ಯಾನಾ | ಹಾಹಾ |
ತರಳ ಯವ್ವನ ವೃದ್ಧ ಪರಿಯಂತ ಮಾಡಲು
ಎರಡೊಂದು ಪರಿಯಲ್ಲಿ ಮಿನಗುವ ದೇವನ್ನ ವಂದಿಸು ||5||
ಒಂದೊಂದು ಅವಯವದಿಂದ ತತ್ವ
ಮಂದಿಯ ಪಡೆದ ಗೋವಿಂದ ಅವ
ರಿಂದ ಸ್ತುತಿಸಿ ಕೊಂಡಾನಂದ ಬಂದು
ಕುಂದದೆ ವರ್ಣಿಪ ಛಂದಾ | ಹಾಹಾ |
ಎಂದಿಂಗೆಂದೀಗೆ ಗುಣವೃಂದ ಎಣಿಪರಾರು
ತಂದೆ ಎಂದೆಂದಿಗೂ ಸುಖ ತಂದು ಕೊಡುವನ್ನ ವಂದಿಸು||6||
ಅನಿರುದ್ಧ ಪ್ರದ್ಯುಮ್ನ ಸಂಕರುಷಣ ವಾಸುದೇವ ನಿಃಶಂಕ
ತನ್ನ ನೆನೆದವರಿಗೆ ನಿರಾತಂಕ | ಹಾಹಾ |
ತನಗೆ ತಾನೆ ಬಿಜ್ಜಣನಾಗಿ ಜೀವರ
ಕ್ಷಣ ಬಿಡದಲೆ ಕಾರಣನಾಗಿ ಇಪ್ಪನ್ನ ವಂದಿಸು||7||
ಕಾರ್ಯಕಾರಣ ರೂಪದಿಂದ ಸರ್ವಕಾರ್ಯ
ಮಾಡಿಸುವ ಮುಕುಂದ ಸ್ವರ್ಣ
ವೀರ್ಯವಿಟ್ಟನು ವೇಗದಿಂದ ಪದ್ಮ
ಭಾರ್ಯಳಲ್ಲಿ ದಯದಿಂದ | ಹಾಹಾ |
ಮರ್ಯಾದಿಯಲಿ ಸುರ ವೀರ್ಯಾಂಡಾ ಪುಟ್ಟಿಸಿ
ಪರ್ಯಾಯದಲ್ಲಿ ತಾತ್ಪರ್ಯ ನುಡಿಸುವನ್ನ ||8||
ಮೀನ ಕಮಠ ಕಿಟಿ ಮನುಜ ಸಿಂಗ ದಾನ ಪಿಡಿದ ಭೃಗು
ತನುಜ ಸೀತಾ ಪ್ರಾಣೇಶ ಬಲಭದ್ರಾನುಜ
ಅಭಿಮಾನಗೇಡಿ ದುಷ್ಟದನುಜ | ಹಾಹಾ |
ಶ್ರೇಣಿಯ ವ್ರತವ ಕ್ಷೀಣವಗೈಸಿನ್ನು
ಜಾಣರ ಕಾಯಿದ ಅನಾಥ ಮಿತ್ರನ್ನ ವಂದಿಸು ||9||
ಕಪ್ಪು ಕೂಡಿದ ಐದು ಮೂರ್ತಿ ಮತ್ತೆ
ಒಪ್ಪುವ ಚತುರ ವಿಂಶತಿ ಮುಂದೆ
ಇಪ್ಪವು ಈರೈದು ಶತಿಹೆಚ್ಚೆ ತಪ್ಪದೆ ಸಾಸಿರ ಮೂರ್ತಿ | ಹಾಹಾ |
ಅಪ್ಪುತ ವಿಶ್ವಾದಿ ಅಪಾರಾ ಅಜಿತಾದಿ
ಗಪ್ಪ ನನ್ನಯಗಳು ಜಪ್ಪುತಜಾದಿಯ ವಂದಿಸು||10||
ಎಸೆವ ಕಪಿಲ ವೇದವ್ಯಾಸಾ ತಾಪಸ ವೃಷಭ ಮಹಿದಾಸಾ ರಂ
ಜಿಸುವ ಸಾರ್ವಭೌಮ ಹಂಸಾ ದಿವ್ಯ
ಪೆಸರಾದ ವೈಕುಂಠಾಧೀಶಾ | ಹಾಹಾ |
ಕುಶಲ ಹಯಮೊಗ ಅಸುರರ ಮೋಹ ಕ
ಲಶ ತಂದ ಧನ್ವಂತ್ರಿ ಋಷಿದತ್ತ ಕೃಷ್ಣನ್ನ||11||
ನಾರಾಯಣ ವಿಷ್ಟಕ್ಸೇನಾ ಗುಣ ಸಾರಾ ಹರಿ ರುದ್ರಪ್ರಾಣಾ ಶಿಂಶು
ಮಾರವಿದ್ಭಾನು ಗೀರ್ವಾಣ ಪಟ
ಸಾರಿದ ಯಜ್ಞನಿದಾನಾ | ಹಾಹಾ |
ಕಾರುಣ್ಯನೇಕಾವತಾರ ಜಡ ಜೀ
ವರ ಸಂಗಡ ವಿಸ್ತಾರವಾಗಿಪ್ಪನ್ನ ವಂದಿಸು ||12||
ಇಂತು ಬಲ್ಲಿದ ಸಿರಿ ಅರಸಾ ತನ್ನ ಅಂತು
ತೋರನು ವಂದು ದಿವಸಾ ಎಲ್ಲ
ಸಂತರಿಗೆ ನಾಮ ತರಸಾ ದುಷ್ಟ ಚಿಂತೆಯಲ್ಲಿ
ಭಕ್ತರಿರಸಾ | ಹಾಹಾ |
ನಿಂತು ನಿರ್ಮಳ ಸ್ವಾತಂತ್ರತನಾದಲ್ಲಿ|
ತಂತು ನಡಿಸುವ ಆದ್ಯಾಂತ ಸತ್ ಚಿತ್ತನ್ನ ವಂದಿಸು ||13||
ಅಷ್ಟ ಕರ್ತೃತ್ವ ಷಡ್ಗುಣ್ಯ ಭೂತಿ ಇಷ್ಟದಲ್ಲಿಪ್ಪ ನಿರ್ಗುಣಾ ಸರ್ವಾ
ಭೀಷ್ಟವ ಕೊಡುವ ಸತ್ರಾಣಾ ತನ್ನ ನಿಷ್ಠೆ
ಉಳ್ಳವರಿಗೆ ಕರುಣಾ | ಹಾಹಾ |
ತುಷ್ಟಾಗಿ ಇಟ್ಟ ಅನಿಷ್ಟ ಪಾಪ ಪುಣ್ಯ
ನಿಷ್ಟವ ಮಾಡಿ ವಿಶಿಷ್ಠನ ಪೊರೆವನ್ನ ||14||
ಎರಡೈದಾವರಣಾ ಬೊಮ್ಮಾಂಡ ಮಾಡಿ
ತರತಮ್ಯ ಗುಣ ಥಂಡ ಥಂಡಾದಿಂದ
ವಿರಚಿಸಿದನು ಉದ್ದಂಡಾ ಆವಾ
ತರುವಾಯ ಉಪಾಯ ಕಂಡಾ | ಹಾಹಾ |
ಪರಮೇಷ್ಠಿಯ ತನ್ನ ಹಿರಿಯಮಗನ ಮಾಡಿ
ಪರಿಪಾಲಿಪ ಚತುರ ಭುವನೇಶನ ವಂದಿಸು ||15||
ವಿರಾಟರೂಪವ ಧರಿಸೀ ಅದೇ ಶರೀರದಲ್ಲಿ
ಸುರರ ಧರಿಸಿ ತಂದು
ವಾರಿಜ ಭವದೊಳು ಹೊರಿಸೀ ಪೋಗಿ
ಆರು ತಿಳಿಯದಂತೆ ಮೆರೆಸೀ | ಹಾಹಾ|
ಕೀರುತಿಯನು ಸರ್ವ ಭಾರ ಕರ್ತನಾಗಿ
ಕ್ರೂರರಿಗೆ ಸುಕುಠಾರವಾಗಿದ್ದನ್ನ ವಂದಿಸು ||16||
ಅವರವರೋಗ್ಯತ ನೋಡಿ ಸುಕೃತ
ದುಷ್ಕರ್ಮಗಳು ನೀಡಿ ಮುಕ್ತಿ
ಭವತಮನಸಿನಲ್ಲಿ ಕೂಡಿ ಚರಿ
ಸುವ ಸಂಬಂಧವ ಮಾಡೀ | ಹಾಹಾ |
ತ್ರಿವಿಧ ಜೀವರ ಸಾಕುವ ವೈಷಮ್ಯವಿಲ್ಲ
ದವನಾಗಿ ಸಾಮರ್ಥನವ ನವ ಮಾಯನ್ನ ವಂದಿಸು||17||
ನಿತ್ಯಾನಿತ್ಯ ಪದಾರ್ಥದಲ್ಲಿ ವ್ಯಾಪ್ತ ಸತ್ಯ ಸಂಕಲ್ಪ ವೇದದಲ್ಲಿ ಕೇಳು
ಅತ್ಯಂತ ಮಹಿಮಾ ಎಲ್ಲೆಲ್ಲಿ ತನ್ನ
ಸ್ತೌತ್ಯಮಾಳ್ಪರ ಬಳಿಯಲ್ಲಿ | ಹಾಹಾ |
ಭೃತ್ಯನಾಗಿ ನಿಂದಾಗ ನಿತ್ಯವೊಲಿದು ಅಪ
ಮೃತ್ಯು ಪರಿಹರಿಸುವ ಮುತ್ಯನ್ನ ಕಾಯಿದನ್ನ ವಂದಿಸು ||18||
ದ್ರವ್ಯಕರ್ಮದಿ ವಸ್ತಾವಾ ಇವು ಅವ್ಯಯ ಹರಿ ವಿಸ್ತಾವಾ ತೋರಿ
ಹವ್ಯಾದಿ ಯಜ್ಞ ಪ್ರಸ್ತಾವಾ ರಚಿಸಿ ದಿವ್ಯ
ಮೂರುತಿ ತನ್ನ ಸ್ಥಾವಾ | ಹಾಹಾ |
ಭವ್ಯ ಲೋಕಕೆ ಸಂಜ್ಞೆ ಇತ್ತು
ಸೇವ್ಯಮಾನನಾದ ಅವ್ಯಕ್ತವಾಸಾ ಸವ್ಯದಲ್ಲಿಪ್ಪನ್ನ ವಂದಿಸು ||19||
ಶಬ್ದ ಸ್ಪರ್ಶ ರೂಪ ರಸ ಗಂಧ ಅಬ್ಧಾವು ಮತ್ತೆ ಪ್ರಕಾಶಾ ವಾಯು
ನಿಬ್ಬಡಿಯಾದ ಆಕಾಶವಾಯು
ಶಬ್ದ ಹಸ್ತಂಘ್ರಿಲೇಶಾ | ಹಾಹಾ |
ಇಬ್ಬಗಿ ಗುಹ್ಯವು ಶಬ್ದಗ್ರಹ ಚಕ್ಷು
ತಬ್ಬು ಜಿಹ್ವೆ ಘ್ರಾಣಗಬದಿ ಮಾಳ್ಪನ್ನ ವಂದಿಸು ||20||
ಪಿತಾಮಹಾ ಸುರಪಾಲಾ ದಿಗ್ದೇವತಿಗಳು
ರವಿ ವಾಯು ಶೀಲಾ ಗಂಗಾ
ಪ್ರತಿವೇದ್ಯರು ಸ್ವಾಹಾಲೋಲಾ ಅಜಾಸುತ
ಜಯಂತನು ಕಮಲಾ | ಹಾಹಾ |
ಪಿತಸ್ವಯಂಭುವಾ ಬೃಹಸ್ಪತಿ ಪಂಚಪ್ರಾಣರು
ಮತಿಪ್ರದಾ ಪ್ರವಾಹಾಹುತವಾದ್ಯಾರಿಷ್ಟನ್ನ ವಂದಿಸು ||21||
ತತುವಕದಭಿಮಾನಿ ದೇಹಾ ಉಂಟು
ತತುವೇಶ ಜೀವರ ಸ್ನೇಹ ಸಿರಿ
ಪತಿತಾನೆ ಪ್ರವೇಶ ಮೋಹಾದಲ್ಲಿ ಪ್ರತಿದಿನ
ವಾಸ ಸಂದೇಹಾ | ಹಾಹಾ |
ಸತತ ಮಾಡಲಿ ಸಲ್ಲಾ ಚತುರ ಬಗೆ ತಿಳಿ
ದಿತರ ವ್ಯಾಕುಲ ಬಿಟ್ಟ ಮತಿಯಾಗಿ ಮೋದನ್ನ ವಂದಿಸು||22||
ಪಂಚಭೇದಾರ್ಥವ ತಿಳಿಯೋ ದುಷ್ಟ
ಪಂಚೇಂದ್ರಿಯಗಳ ಅಳಿಯೊ ಜ್ಞಾನಿ
ಪಂಚೆಯಲ್ಲಿ ಪೋಗಿ ಸುಳಿಯೋ | ಹಾಹಾ |
ಮಿಂಚಿನಂದದಿ ಲೋಕಾಸಂಚಾರ ಮಾಡುತಾ
ಕೊಂಚೆದವನಾಗಿ ಚಂಚಲಾ ತೋರಿ ಹರಿಯಾ ವಂದಿಸು ||23||
ಕಲಿ ನಾಲ್ವರಿಗೆ ಪ್ರವೇಶಾ ಇಲ್ಲಾ
ಉಳಿದವರಿಡಿದು ಗಿರೀಶನೊಳು
ನೆಲೆಯಾಗಿಪ್ಪ ದಾನೀಶಾ ಶಬ್ಧಾ
ಬಳಲೀಸುವದಕವ ಹೇಸಾ | ಹಾಹಾ |
ಜಲಜಜಾಂಡದ ಮಧ್ಯ ಬಲು ದುಃಖಕೆ ವೆಗ್ಗಳ ಶಿರೋಮಣಿ
ಇವನ್ನಾಳದನ್ನ ಒಡಿಯನ್ನ ವಂದಿಸು ||24||
ಮುಕ್ತಿಲಿ ತಾರತಮ್ಯವೆನ್ನು ಆಸಕ್ತನಾಗಿ ಕೇಳು ಇನ್ನು ಇಂಥಾ
ಉಕ್ತಿಗೆ ಕೇಡಿಲ್ಲಾವೆನ್ನ ಕಾವಾ ಶಕ್ತಿವಂತನು ನಮ್ಮನ್ನ | ಹಾಹಾ |
ರಿಕ್ತವೃತ್ತಿಯಲ್ಲಿ ವಿರಕ್ತನಾಗು ದು
ರೂಕ್ತಿಯ ತೊರೆದು ವಿಮುಕ್ತನಾಗು ಹರಿಯಾ ವಂದಿಸು ||25||
ಹರಿವುಂಡ ಎಂಜಲಾ ಉಂಡು ಮತ್ತೆ
ಹರಿವುಟ್ಟ ಉಡುಗೆ ಕೈಕೊಂಡು ಉಟ್ಟ
ಹರಿ ನಿರ್ಮಾಲ್ಯವೆ ಗಂಡು ತೆರನಾಗಿ
ಮುಡಿದಿದ್ದ ಹಿಂಡು |ಹಾಹಾ |
ದುರಿತಗಳ ಗೆದ್ದು ಹರಿ ಮಾಯಾವಿಡಿದು ವು
ಚ್ಚರಿಸು ನಾಮಂಗಳು ನಿರುತರಾ ರಂಗನಾ ವಂದಿಸು ||26||
ಚತುರ್ವಿಧ ಅರ್ಚಕರು ಶುದ್ಧದಾರುತಿಗಳು
ಜಗದೊಳಧಿಕರು ಎನ್ನು
ಸತತ ನುಡಿವರು ಶೋಧಕರು ಜ್ಞಾನಿ -
ಗತಿಶಯನೆಂದು ಧಾರ್ಮಿಕರು | ಹಾಹಾ |
ಕ್ಷಿತಿಯೊಳು ಕೇವಲ ರತಿಪತಿಜನಕಂಗೆ
ಹಿತವಾಹಿಯಿಪ್ಪ ಸಮ್ಮತವೆಂದು ಕೃಷ್ಣನ್ನ ವಂದಿಸು ||27||
ನಿಷ್ಠೆಯಿಂದಲಿ ಕೃಷ್ಣ ಕೃಷ್ಣನೆಂದು ಮೂರು
ಸಾರಿ ಕೂಗಿ ಸಾರಿ ಪೇಳಿ
ದಷ್ಟಮಾತುರದಲ್ಲಿ ಮಾಡಿ ಓಡಿ
ನಷ್ಟವಾಗೋವು ಹೆದರಿ | ಹಾಹಾ |
ಗಟ್ಯಾಗಿ ದೊರಕೋದು ಇಷ್ಟು ಪುಣ್ಯದಲ್ಲಿ ಸಂ
ತುಷ್ಟನಾಗುವಾ ಸಿದ್ದಾ ವೃಷ್ಟಿಕುಲಜನ್ನ ವಂದಿಸು ||28||
ರಥಕೆ ಕುದರಿಯಂತೆ ಕಟ್ಟೀ ಭಕ್ತ
ಪಥವ ಪಿಡಿಸಿದನಾ ಅಟ್ಟೇ ಬಿಟ್ಟ
ವ್ಯಥಿಯ ಮಾಡಿದ ಮೊಳೆ ತಟ್ಟಿ
ಮನ್ಮಥ ಪಿತನಾದಡಿ ಗುಟ್ಟೀ | ಹಾಹಾ |
ಸಥೆ ಇತ್ತದು ನೋಡು ಪೃಥ್ವಿಯೊಳಗೆ ಖಗ
ರಥನ ಕಾರುಣ್ಯಕೆ ಪ್ರತಿಯಿಲ್ಲ ಪೊರೆವನ್ನ ವಂದಿಸು ||29||
ಕೊಟ್ಟಾರೆ ತಪ್ಪಾದದೇನು ಬಲು
ದುಷ್ಟ ಜನಾ ತಿಮಿರಭಾನು ನಿತ್ಯಾ
ನುಷ್ಠಾನ ಮಾಡೋದು ನೀನು ಹರಿ
ಪಟ್ಟಣ ಇಲ್ಲಿಗೆ ಗೇಣು | ಹಾಹಾ |
ಕೊಟ್ಟಿದ್ದು ಉಂಡು ವಿಶಿಷ್ಟನಾಗಿ ಬಾಳು
ಕಟ್ಟಕಡೆಯಲಿ ನಿಷ್ಠನಾಗಿ ಹರಿಯಾ ವಂದಿಸು||30||
ಜ್ಞಾನವಿಲ್ಲಾ ಮುಕ್ತಿ ಇಲ್ಲಾ ಇದು ಅನಂತಕಾಲಕೆ ಬಲ್ಲಾದೆನ್ನ
ಸ್ನಾನಾದಿಗಳ ಮಾಡೆ ಎಲ್ಲಾ ಪುಣ್ಯ
ತಾನುಂಟಾ ಸಂಪದವಿಲ್ಲಾ | ಹಾಹಾ |
ನಿನ್ನೊಳಗೆ ನೀನು ಧೇನಿಸು ಅನುಭವ
ಮಾನವನಾಗದೆ ಕಾಣಿಸ ಹರಿಯನ್ನ ವಂದಿಸು ||31||
ಅಜಗೆ ನಿರ್ಮಳವಾಗಿ ಪೊಳೆವಾ
ಬೊಮ್ಮಜಗೆ ಕನ್ನಡಿಯಂತೆ ಸುಳಿವಾ ಸುರ
ವ್ರಜಕೆ ತರಣಿಯಂತೆ ನಿಲುವಾ ಮನುಜರಿಗೆ
ಮಿಂಚಿನ ತೆರೆವೀವಾ | ಹಾಹಾ |
ಸುಜನರಿಗೆ ತನ್ನ ಭಜನಿಯ ಪಾಲಿಸಿ
ನಿಜರೂಪ ಕೊಡುವಾ ವಿರಜನದಿಯ ಪೆತ್ತನ್ನಾ ವಂದಿಸು ||32||
ಹದಿನಾಲ್ಕು ಲೋಕದ ಮಧ್ಯದಲ್ಲಿ
ಅಧಿಕವಾಗಿವೆ ಅಭೇದ್ಯಾ ಮೂರು
ಸದನಗಳುಂಟು ಅನಾದ್ಯಾ ಕಾಲ
ಹದುಳವಾಗಿಪ್ಪವು ಸಾಧ್ಯಾ | ಹಾಹಾ |
ಮೊದಲು ಮುಕ್ತಿಗೆ ಪೋದಾ ಪದುಮ ಭವಾದ್ಯರು
ಇದೆ ಪದವಿಯಲಿ ತೋಷದಲ್ಲಿ ಇಪ್ಪದು ನೋಡಿ ವಂದಿಸು ||33||
ಜೀವರ ಪ್ರಮಾಣೆಂದೆ ಲೋಕ
ಜೀವನು ತಮಗೆ ತಾವಂದೆ ಹೀಗೆ
ಭಾವಿಸು ಮರ್ಯಾದಿಯೆಂದೆ ಸಿದ್ಧಾ
ಶ್ರೀವರ ಮಾಡಿದೆ ಅಂದೆ | ಹಾಹಾ |
ಆವಾವಾ ಸ್ಥಾನದಿ ಅವರವರಾ ಇಟ್ಟು
ಸೇವಿಯ ಕೊಂಬ ಪಾವನ ಮೂರುತಿಯ ವಂದಿಸು ||34||
ಮೊರೆ ಇಟ್ಟು ಬೇಡಲು ಕೊಡನು
ಅವಾಕರದಾ ಮಾತಿಗೆ ವಡಂಬಡನು ಬಲು
ಪರಿತೋರಲು ದಯವಿಡನು ತನ್ನ
ಸರಿಬಂದರೆಯಲ್ಲಿ ಬಿಡನು | ಹಾಹಾ |
ತುರುಬು ಹಿಡಿದು ತುಪ್ಪಾ ಸುರಿಸುವವಲ್ಲೆನೆಂದರೆ ಕೇಳಾ
ಶರಣಗೆ ಶರಣನಾಗಿಪ್ಪನ್ನ ವಂದಿಸು ||35||
ಭಾಸುರ ದೀನ ಮಂದಾರಾ ರತ್ನ
ರಾಶಿ ಹಗಲು ಬೇಗ ಬಾರಾ ನಿನ್ನ
ದಾಸನೆಂದರೆ ಕೆಲಸಾರಾ ಅಂದಾ
ಮೀಶೆಕೂಟ್ಟಿಸಿಕೊಂಡ ಧೀರಾ | ಹಾಹಾ |
ಏಸು ಬಗೆಯಲ್ಲಿ ವರ್ಣಿಸಬಲ್ಲೆನು ಮಾನಿಸ
ವೇಷನ ಧರಿಸಿದ ಸುಲಭನ್ನವಂದಿಸು ||36||
ಗಲಭೆ ಇದೇನು ಎಂಬ ಸುಳಾದಿ
ವಲಿಸಿದನು ನೋಡಿಲೇಸು ನಮಗೆ
ಕೆಲಕಾಲ ಕೊಟ್ಟು ಮನ್ನಿಸು ಲಾಲಿ ಸಲಹುವ
ದಾಸರಾ ನೆನೆಸು| ಹಾಹಾ |
ಬಳಲಿದ್ದು ಕರಿಯಾ ಹುಯ್ಯಾಲಿಗೆ ಬಂದೊದಗಿದ
ನಳಿನನಾಭನ ದಯಾ ಜಲನಿಧಿ ಎಂದು ಇಂದು ವಂದಿಸು||37||
ಎಂಭತ್ತು ನಾಲುಕು ಲಕ್ಷಾ ಯೋನಿ ಇಂದಾಗಿ
ಮಾಡಿದಾ ದಕ್ಷಾ ತಾನೆ
ಡಿಂಭಾದೊಳಗೆ ನಿಂತು ದೀಕ್ಷಾ ಬದ್ಧ
ಎಂಬೋದು ತಿಳುಪುವಧ್ಯಕ್ಷಾ | ಹಾಹಾ |
ಕುಂಭಿಣಿಯೊಳಗೆಲ್ಲಾ ಉಂಬೋದ ತಪ್ಪಿಸಿ
ಬೆಂಬಿಡದಲೆ ಸರ್ವ ತುಂಬಿಕೊಂಡಿಪ್ಪನ್ನ ವಂದಿಸು ||38||
ಇದರೊಳು ಭೂಸುರ ಬಿಂಬಾವನ್ನ
ಅಧಿಕ ಮಾಡಿದನು ಕಂಸಾಸುರನ
ವಧೆ ಮಾಡಿದಾ ಸುರೋತ್ತಂಸಾ ತನ್ನ ಪದವ
ನಂಬಲು ಪಾಪಧ್ವಂಸಾ | ಹಾಹಾ ||39||