ಪಾಹಿ ಮದನಗೋಪಾಲ
Category: ಶ್ರೀಕೃಷ್ಣ
Author: ವಿಜಯದಾಸ
ಪಾಹಿ ಮದನಗೋಪಾಲ |
ಮುಕುಂದ ಪಾಲಿತ ಮುಚುಕುಂದ ||
ನಂದನಂದನ ನಂದಿತ ಮುನಿಜನ |
ಮಂದಹಾಸವದನ-ಹರೇ ಕೃಷ್ಣ ||
ದಂಡಿತರಿಪುಜನ ಅಂಡಜವಾಹನ |
ಪುಂಡರೀಕನಯನ - ಹರೇ ಕೃಷ್ಣ||
ಪತಿತಪಾವನ ನತಜನಾವನ |
ಸತತಾನಂದಘನ-ಹರೇ ಕೃಷ್ಣ||
ಇಂದಿರಾರಮಣ ಮಂದರಭರಣ |
ವಂದಿತದೇವಗಣ ಹರೇ ಕೃಷ್ಣ ||
ರತಿಪತಿಜನಕ ಶ್ರಿತಸಂರಕ್ಷಕ |
ನುತಯದುಕುಲತಿಲಕ-ಹರೇ ಕೃಷ್ಣ ||
ವಿಧಿನುತಶೀಲ ವಿಜಯಗೊಪಾಲ |
ವೇದನಿಕರಪಾಲ-ಹರೇ ಕೃಷ್ಣ||