ಶರಣು ಶರಣು ಲಿಂಗಾ

Category: ಶ್ರೀಶಿವ

Author: ವಿಜಯದಾಸ

ಶರಣು ಶರಣು ಲಿಂಗಾ | ಶರಣು ಶ್ರೀ ಭಸಿತಾಂಗಾ |
ಶರಣು ಗಗನ ಗಂಗಾಧರ ಗೋರಾಜ ತುರಂಗ |
ಗುರುಕುಲೋತ್ತುಂಗಾ

ಅಂತರಿಕ್ಷ ಪುರಹರ | ಸಂತರ ಮನೋಹರ |
ಅಂತಕನ ಗೆದ್ದೆ | ದಂತಿ ಚರ್ಮವ ಪೊದ್ದೆ |
ಕಂತು ಮುನಿಯ ಗೆಲಿದೆ ಮಂತ್ರಿವಂದಿತ ಶೀಲ |
ಸಂತತಿಗಳ ಪಾಲ |
ಅಂತರಂಗದಲೆನ್ನ ಗ್ರಂಥಿಯ ಹರಿಸಿ ನಿರಂತರ ಸಂತರಿಸೋ||1||

ಮನ ವೈರಾಗ್ಯದಧಿಪತಿಯೇ |
ಮುನಿದು ದುರ್ವಾಸ ಶುಕ ಯತಿಯೆ |
ವನದೊಳು ರಾಯನ | ವನುತಿಯ ಮಾಡಿದ |
ಘನ ಶೌರ್ಯನ ಶಿವನೆ ||
ಸನಕಾದಿಗಳ ಪರಿಯ | ಅನುದಿನದಲಿ ಗಿರಿಯ |
ತುನುಜೆಯ ಹೃದಯಾಬ್ಜ | ದಿನಕರ ಶಶಿಜೂಟ |
ಫಣಿಭೂಷಣ ಶಂಭೋ ||2||

ಅಹಂಕಾರಾತ್ಮನೆ ಶರ್ವ | ಮಹಾಕೇಶ ವಿಷಗ್ರೀವ |
ಬಹುದೂರ ಕೂಟ | ಮಹಿಧರ ನಿವಾಸನೆ |
ಮಹಿಧರ ತೀರದಿ ||
ಮಹಿಮೆಯ ಬೀರುತ್ತ | ರಹಸ್ಯದಲಿ ಮೆರೆವ |
ಶ್ರೀಹರಿ ವಿಜಯವಿಠ್ಠಲ ಸವೋತ್ತಮ ನಹುದೆಂದು ಧೇನಿಪನೆ||3||