ಶರಣು ಶೇಷಾಚಲ ನಿವಾಸಗೆ

Category: ಶ್ರೀಕೃಷ್ಣ

ಶರಣು ಶೇಷಾಚಲ ನಿವಾಸಗೆ | ಶರಣು ವರಹ ತಿಮ್ಮಪ್ಪಗೆ |
ಶರಣು ಅಲಮೇಲುಮಂಗ ರಮಣಗೆ
ಶರಣು ತಿರುವೆಂಗಳೇಶಗೆ

ಧರಣಿಧರ ಗೋವಿಂದ ಮಾಧವ |
ನರಹರಿ ಮಧುಸೂದನಾ |
ಮುರಹರ ಮುಕುಂದ ಅಚ್ಯುತ |
ಗಿರಿಜನುತ ನಾರಾಯಣಾ ||1||

ಕ್ಷೀರ ವಾರಿಧಿಶಯನ ವಾಮನ |
ಮಾರ ಜನಕ ಗೋಪಿ ಜನ |
ಜಾರ ನವನೀತ |
ಚೋರ ರಿಪು ಸಂಹಾರ ಹರಿ ದಾಮೋದರ ||2||

ಗರುಡಗಮನನೆ ಗರಳ ತಲ್ಪನೆ |
ಕರುಣಾಳುಗಳ ಒಡೆಯನೆ |
ಉರಗ ಗಿರಿ ಸಿರಿ ವಿಜಯವಿಠ್ಠಲನ |
ಚರಣ ಕಮಲಕೆ ನಮೋ ನಮೋ ||3||