ಪ್ರಭುವೆನ್ನ ಅವಗುಣ ಮನದಿ

Category: ಶ್ರೀಸ್ವಾಮಿ ವಿವೇಕಾನಂದ

Author: ಸ್ವಾಮಿ ಹರ್ಷಾನಂದ

ಪ್ರಭುವೆನ್ನ ಅವಗುಣ ಮನದಿ ಧರಿಸದಿರು |
ವಿಭುವೇ ಸಮದರುಶನ ತವ ಸುಗುಣವು |
ಅಭಯವ ನೀಡುತ ಕೃಪೆಯಿಂ ಪಾಲಿಸು ||

ಲೋಹದ ವಿಗ್ರಹ ಪೂಜೆಯಲಿರ್ಪುದು
ಲೋಹವದಲ್ತೆ ವ್ಯಾಧನ ಖಡ್ಗವು |
ಪರುಸಮಣಿಯದೋ ಭೇದವ ಕಾಣದು
ಎರಡನೂ ಸೋಂಕಲು ಕಾಂಚನವಾದುವು ||

ನದಿಯೆಂದೆಂಬರು ನೀರೊಂದ
ಬದಿಯೆಂದೆಂಬರು ಮತ್ತೊಂದ |
ಗಂಗೆಯ ಸೇರಲು ಭರದಿಂದ
ಮಂಗಳವಾಗವೆ ಅದರಿಂದ ||

ಬೇರೆಯೆ ಜೀವನು, ಬೇರೆಯೆ ಬ್ರಹ್ಮವು
ಸೂರದಾಸನದ ಒಪ್ಪುವುದಿಲ್ಲವು |
ಭೇದಕೆ ಮೂಲವು ಅಜ್ಞಾನವದು
ಭೇದವ ಕಾಣನು ಜ್ಞಾನಿಯು ಎಂದೂ ||