ಶ್ರೀ ಕಮಲನೇತುರ ಪುಣ್ಯಗಾತುರ |

Category: ಶ್ರೀಕೃಷ್ಣ

Author: ವಿಜಯದಾಸ

ಶ್ರೀ ಕಮಲನೇತುರ | ಪುಣ್ಯಗಾತುರ |
ಸಾಕಾರ ಕ್ಷಣ ಮಾತುರ | ನೀ ಕರುಣದಿಂದ |
ವಾಕು ಲಾಲಿಸು | ಬೇಕು ವೇಗದಲಿ |
ಗೋಕುಲಾಂಬುಧಿ ರಾಕಾಂಬುಜ ಲಾ |
ವಕರ ತೊಲಗಿಸಿ | ಸಾಕುವುದೆನ್ನ ನಿ | ಜಕರ ವಿಡಿದೂ

ದೇವಕಿ ಗರ್ಭ ಸಂಭೂತ | ನಿತ್ಯ ಅಜಾತಾ |
ಪಾವನ ಬಲು ಚರಿತಾ | ಕೋವಿದರರಸ ಶತ |
ಕುಂಭ ಮಕುಟನೀತಾ |
ಮಾವ ಮರ್ದನ ನಿರ್ಭೀತಾ ||
ದೇವಮರರ ಕಾ | ವ ಭಕ್ತರ | ಜೀವನೆ ವರ |
ವೀವನನುದಿನ | ಆವು ಕಾವುತ ಪೋಗಿ |
ಗೋವಳರೊಡಗೂಡಿ | ಪಾವಿನ ಪೆಡೆ ತುಳಿ |
ದಾ ವಿಷ ಬಿಡಿಸದೆ ||
ಶ್ರೀ ವಲ್ಲಭ ನಿನಗಾವವನೆಣೆ ತ್ರಿ |
ಭುವನದೊಳಗತಿ |
ಸೇವಕ ಜನರಿಗೆ ಕೈವಲ್ಯವನು ಕೊಡುವಾ ||1||

ಪೂತನಿ ಪ್ರಾಣಾಪಹಾರಾ | ಪರಮ ಸುಂದರಾ |
ಜ್ಯೋತಿರ್ಮಯ ಶರೀರ | ಮಾತಾ ಬಂಧ
ಪರಿಹಾರಾ | ಮರಣಜರ ವಿದೂರಾ |
ಭೂತಿ ಉಳ್ಳಿಂದ್ರ ಕುಮಾರಾ | ಸೂತ ನೀನಾಗಿ ಭೂತಳದೊಳು |
ಪಾತಕ ಕುರು | ವ್ರಾತ ಯಮುನೆಯ |
ಭ್ರಾತನ್ನ ನಗರಿಯ | ಯಾತನಿಗಟ್ಟಿದೆ |
ಪೂತುರೆ ನಿನ್ನ ಮಾ | ಯಾತನಕೇನೆಂಬೆ |
ಖ್ಯಾತಿ ಮೂರುತಿ ಬೆನ್ನಾತು ಕಾಯೊ ಪಾರಿ |
ಜಾತವ ತಂದ | ಮಿತ ಮಹಿಮ ಜಗ |
ತಾತಾ ಬೊಮ್ಮಾದಿ ವಿನುತಾ ||2||

ಈ ಪಡವಲಾಬ್ದಿ ವಾಸಾ | ಇಂಪಾದ
ತೋಷ ಗೋಪಾಲ ಮಾನಿಸಾ ವೇಷ |
ಆ ಪಾರ ರತುನ ಭೂಷಾ | ನಂತಪ್ರಕಾಳಾ |
ತಾಪಸಿಗಳ ವಿಲಾಸಾ ||
ಕೋಪ ಮೊದಲಾದ ತಾಪತ್ರಯಗಳ |
ನೀ ಪೋಗಾಡು ಉ |
ಡುಪಿ ಸದನನೆ ಪಾಪರಹಿತ ಮಧ್ವಪತಿ ಕರದಿಂ |
ದ ಪೂಜೆಗೊಂಡ ಪ್ರತಾಪನೆ ಜ್ಞಾನದ | ದೀಪ ಬೆಳಗಲಿ |
ರೂಪವ ತೋರಿಸು ಯದುಪಾ ಎನ್ನ ಸಮೀಪಾ ||3||