ಶ್ರೀ ಮಧ್ವಮತ ಸಾಗರದೊಳಗೆ ಲೋಲಾಡಿ
Category: ಶ್ರೀಕೃಷ್ಣ
Author: ವಿಜಯದಾಸ
ಶ್ರೀ ಮಧ್ವಮತ ಸಾಗರದೊಳಗೆ ಲೋಲಾಡಿ
ಆ ಮಹಾತತ್ವ ತಾರತಮ್ಯಗಳ ತಿಳಿದು
ಕಾಮ ಕ್ರೋಧಗಳೆಲ್ಲ ಹಳಿದು ಗುರು ಹನುಮಂತ
ಭೀಮ ಮಧ್ವಮುನಿಯ ಸಾರಿರಯ್ಯ | ಅಯ್ಯಯ್ಯಾ
ಅಂಜನೇಯ ಗರ್ಭದಲಿ ಜನಿಸಿ ಆಕಾಶದಲ್ಲಿ
ಕಂಜನಾಪ್ತನ ತುಡುಕಿ ಕಿಷ್ಕಿಂಧದಲಿ ಕಪಿ
ರಂಜನನ ಕೂಡಿ ಪಂಪಾ ತೀರದಲಿ ದೇವಂಜನ ಪಾದವ
ಕಂಜನಮಿತನಾಗಿ ಬಂದು ಮುದ್ರೆಯ ಧರಿಸಿ
ಜನಕಾತ್ಮಜಗೆಯಿತ್ತು ಅಕ್ಷರಿ ಎನೊ
ಭಂಜನವ ಮಾಡಿ ಲಂಕೆಯನುರಿಪಿ ಬಂದ ಪ್ರ
ಭಂಜನಿಯ ಭಜಿಸಿರಯ್ಯಾ | ಅಯ್ಯಯ್ಯಾ ||1||
ಧರ್ಮನಂದನೊಡನೆ ಜನಿಸಿ ಹಾಲಹಲ ಉಂಡು
ಸೀರ್ಮುಟ್ಟಿ ಪೋಗಿ ನಾಗನ ಗೆದ್ದು ಅರಗಿನ
ಅರ್ಮನೆಯ ದಾಟಿ ವನದೊಳಗೆ ಹಿಡಂಬನ ಶಾ
ರಿರ್ಮುರಿದು ಸೀಳಿ ಬಿಸಟು
ಕಿರ್ಮೀರ ದನುಜರ ಸದೆದು ಪೂತಂದು ಸು-
ಶರ್ಮಕನ ಬಿಗಿದು ಕಣದೊಳಗೆ ದುಶ್ಯಾಸನನ
ಚರ್ಮವನೆ ಸುಲಿದು ಸುಯೋಧನಾಂಕನಾದ
ನಿರ್ಮಳಾತ್ಮಕನ ಭಜಿಸಿರಯ್ಯಾ | ಅಯ್ಯಾಯ್ಯಾ ||2||
ಹರಿಯೆ ಪರನೆಂದು ಬೊಬ್ಬಿಕ್ಕಿ ವಾದಿಗಳೆದೆ
ಬಿರಿಯೆ ದು:ಶಾಸ್ತ್ರಜ ಜರಿಯೆ ದುರ್ಮತಗಳು
ಪರಿಯ ಬಿಡದು ಠಕ್ಕೆ ಮೆರೆಯೆ ಧರೆಯೊಳಗೆ ಈ
ಪರಿಯೆ ಮುನಿಗಾರು ಸರಿಯೆ ಪೊರೆಯ ಭಕ್ತರಿಗೆ ಸುಧೆ
ಗರಿಯೆ e್ಞÁನ ಮಾರ್ಗಾಂಕುರಿಯೆ ವೇದದ ಸಾರ
ನೆರಿಯೆ ರಿಪುಕಾಲ ಮದಕರಿಗೆ ಕೇಸರಿಯೆ ಒಪ್ಪುವ
ಮರಿಯೆ ಜಗದೋರಿ ಗುರುವರ್ಯರಂ
ಭಜಿಸಿರಯ್ಯಾ | ಅಯ್ಯಯ್ಯಾ ||3||
ಅಜನಾಗಿ ಮುಂದೆ ಪಸರಿಸಿ ಬೆಳೆದು ಹರುಷದಲಿ
ತ್ರಿಜಗವನು ನಿರ್ಮಾಣವನು ಮಾಡಿ ಒಂದೊಂದು
ಸೃಜಿಸುವನು ಚಿತ್ರವಿಚಿತ್ರ ಗುಣಗಣವುಳ್ಳ
ವೃಜ ಜೀವ ಜಂತುಗಳನು ನಿಜವಾಗಿ
ಇವನೆಂದು ವೇದಗಳು ಸಾರುತಿವೆ
ಕುಜನಮತವನೆ ಪಿಡಿದು ಪುಸಿಯಿದು ಎಂದೆನ್ನದೆ
ಭಜಿಸಿ ಗುರುಪಥವಿಡಿದು ಸಂದೇಹವನೆ ತೊರೆದು
ಸುಜನರ ಶಿರೋಮಣಿಯಯ್ಯ | ಅಯ್ಯಾಯ್ಯಾ||4||
ಜಾತಿ ಸಂಕರವಾಗಿ ಜಾತಿ ಧರ್ಮವ ತೊರೆದು
ಜಾತವೇದ ಸಯಜ್ಞ ಇಲ್ಲದಿದರೆ ವನಜ ಸಂ
ಜಾತ ಲೋಚನೆಗೆ ಪೇಳೆ ಜಾತಿ
ಮೌಕ್ತಿದಮಣಿ ನುಡಿದ ಕರುಣದಲಿ ದ್ವಿ
ಜಾತರನ ಉದ್ಧರಿಸ ಪೋಗೆನಲು ಜಯ ತನೋ
ಜಾತ ಪುಟ್ಟಿದನು ಇಳಿಯೊಳಗೆ ಮಧ್ಯಗೇಹರ
ಜಾತನಂ ಭಜಿಸಿರಯ್ಯ | ಅಯ್ಯಯ್ಯಾ ||5||
ಇಳಿಯೊಳಗೆ ಬಲವಂತನಾದ ಮತ ಮಧ್ವಮತ
ಸುಲಭವಾಗಿಹುದು ಸುಲಭರಿಗೆ ಕಮಲಕೇತಪನ
ಹೊಳಪು ಹೊಳೆದಂತೆ ವಿಕಸಿತಾ ಮಾಡಿ ಸುe್ಞÁನ
ಜಲಧಿಯೊಳಗಾಡಿಸುವುದು ಮಲತು ನಿಂತಿರ್ದ
ಕಲಿಮನದ ಮಾನವರಿಗೆ ಪ್ರಳಯನಂತಕನಂತೆ
ಹರಿನಾಮ ದಂಡವಾ
ಸೆಳೆದು ಹೊಡೆದೆಬ್ಬಿಸಿ ಹುತ್ತು ಜಲಹೊಗಿಪ
ಗುರುಕುಲತಿಲಕನಂ ಭಜಿಸಿರಯ್ಯಾ | ಅಯ್ಯಯ್ಯಾ ||6||
ದುರವಾದಿಗಳ ಗಂಡ ಗಜದಭೇರುಂಡ ಸಂ
ಕರಣ ಪ್ರಾಣವನರದು ದುರ್ಮಾಯಿ ಮಿಥ್ಯದ
ತರುಬೇರು ಕೀಳಿ ಮೂರಾರೆರಡ್ಯೊಂದು ಕುಹಕ ಭಾಷ್ಯ |
ಮುರಿದು ಉರಹಿ
ಅರಿಗಳಂಗದ ಚರ್ಮ ಸುಲಿದು ಭೇರಿಗೆ ಹಾಕಿ ಹರಿಸೆ ಓಂಕಾರ
ಹರಿ ಪರನೆಂಬೊ ಬಿರುದಾಂತ ಪರಮ ಭಾಗವತರ
ಮಣಿಯಂ ಭಜಿಸಿಯ್ಯಾ | ಅಯ್ಯಯ್ಯಾ ||7||
ಗುರುಕರುಣ ಪಡೆದ ಮಾನವನೆ ಸರ್ವಕೃತಾರ್ಥ
ಗುರುಕರುಣ ಪಡೆಯದಿದ್ದವನ ಜನ್ಮವೇ ವ್ಯರ್ಥ
ಗುರುವಿನನುಸುರಿಸಿ ಉಪದೇಶಕೊಳದಾ ಮಂತ್ರ
ಉರಗ ಉಪವಾಸ ತಂತ್ರ
ಗುರು ಮುನಿದು ಅವಘಡಿಸೆ ಹರಿ ಕರಿ ಕರುಣತಿಪ್ಪುವದು
ಗುರು ದಯಾಕರನಾಗೆ ಹರಿವೊಲಿದು ಸಲಹುವನು
ಗುರುವಾರು ಇವರವರೆಂದೆನದೆ ವರ ವೃಕೋದರನ
ಪಾದವ ನಂಬಿರೈಯ್ಯ | ಅಯ್ಯಯ್ಯಾ ||8||
ಪದ್ಧತಿಯ ಕೇಳಿ ಶುದ್ಧಾತ್ಮರಿದು ವರಗುರು
ಮಧ್ವ ದುಗ್ಧಾಬ್ಧಿಯನು ಕಟಿದ ನವ ನವನೀತ
ಮುದ್ದೆಯನು ತೆಗೆದು ನವವಿಧ ಭಕುತಿರಸದಿಂದ
ಮೆದ್ದು ಸದ್ಭಾವದಲಿ ಸದ್ವೇಷ್ಣವರಾಗಿ ಮೃತ್ಯುವಿನ ಗೋನಾಳಿ
ಒದ್ದು ಕಾಲನ ಮೀರಿ ವೈಕುಂಠಪುರ ಸಾರಿ
ಮಧ್ವಾಂತರ್ಯಾಮಿ ಸಿರಿ ವಿಜಯವಿಠ್ಠಲನ
ಪಾದದ್ವಯವ ಭಜಿಸಿರಯ್ಯಾ ಅಯ್ಯಯ್ಯ ||9||