ಶ್ರೀ ಲತಾಂಗಿರ ರಮಾಕೃಷ್ಣನು

Category: ಶ್ರೀಕೃಷ್ಣ

Author: ವಿಜಯದಾಸ

ಶ್ರೀ ಲತಾಂಗಿರ ರಮಾಕೃಷ್ಣನು
ಬಾಲ ಲೀಲೆಯ ಜಗಕೆ ತೋರುತ ||1||

ಆಡಿಪಾಡುತ ಕೂಡಿ ರಮಿಸುತ
ಗಾಡಿಗಾರನು ಅವಳ ಹೆಗಲನೇರಿಸಿ ||2||

ತಾನೆ ಸುಂದರೀ ಎಂದು ಗರ್ವಿಸೆ
ದೀನನಾಥನು ಅದೃಶ್ಯನಾದನು ||3||

ಅಗರು ಕಸ್ತೂರೀ ಪೂಸಿ ಹೃದಯಕೇ
ಮೊಗರು ಕುಚಗಳ ಮುಖದ ಕಮಲವು ||4||

ಎತ್ತ ಪೋದನೋ ರಂಗ ಎನುತಲಿ
ಚಿತ್ತ ಭ್ರಮೆಯಲಿ ಹುಡುಕುತ್ತಿದ್ದರು ||5||

ಎಲ್ಲಿ ಪೋದನೋ ಕೃಷ್ಣ ಎನುತಲಿ
ಮತ್ತೆ ಸಖಿಯರು ಹುಡುಕುತ್ತಿದ್ದರು ||6||

ಸುತ್ತ ಗೋಕುಲಾದೊಳಗೆ ಸ್ತ್ರೀಯರೂ
ಮತ್ತೆ ಕೃಷ್ಣನ ಪಾದ ಕಾಣದೇ ||7||

ಗಿಳಿಯು ಕೋಗಿಲೇ ಹಂಸ ಭೃಂಗನೇ
ನಳಿನನಾಭನ ಸುಳಿವು ಕಂಡಿರಾ||8||

ಕಂದ ಮೂಲವೇ ಜಾಜಿ ವೃಕ್ಷವೇ
ಇಂದಿರೇಶನ ಸುಳಿವು ಕಂಡಿರಾ ||9||

ಇಂದಿರೇಶನು ನಮ್ಮನು ವಂಚಿಸೀ
ಮಂದಭಾಗ್ಯರ ಮಾಡಿ ಪೋರನು||10||

ಶ್ರುತಿಗೆ ಸಿಲುಕದ ದೋಷದೂರನೇ
ವ್ರತವ ಕೆಡಿಸಿರೆ ಎಲ್ಲಿಗ್ಹೋಗೋಣ||11||

ಇಷ್ಟ ಪರಿಯಲಿ ಸ್ತೋತ್ರಮಾಡಲು
ರಂಗರಾಯನು ಬಂದು ಸೇರಿದ ||12||

ಬಹಳ ಪರಿಯಲಿ ಸ್ತೋತ್ರಮಾಡಲು
ಕೃಷ್ಣರಾಯನು ಬಂದು ಸೇರಿದ||13||

ಮದನನಯ್ಯನಾ ಮುದದಿ ನೆನೆದರೆ
ನದಿಯ ತೀರದಿ ವಿಜಯವಿಠ್ಠಲ||14||

ನದಿಯ ತೀರದ ತೀರ್ಥಪಾದರುಸಲಿಹ
ಭಕುತರ ಪಾಲಿಸೂವನು ||15||