ಶ್ರೀ ವನಿತೆ ವೈನತೇಯ ವಾರುತೆ
Category: ಶ್ರೀದೇವಿ
Author: ವಿಜಯದಾಸ
ಶ್ರೀ ವನಿತೆ ವೈನತೇಯ ವಾರುತೆ ದೇವಾದಿ ವರವಿನುತೆ
ಕಾವದು ಯೆನ್ನ ನೀ ವದಿಗಿ ಮುನ್ನೆ ಈವದು ವರ ಆವದುವಲ್ಲೆ
ದೇವಿ ನಿನ್ನಯ ರಾಜೀವ ಚರಣದ
ಸೇವೆಯ ಪಾಲಿಸು ಕೋವಿದರೊಡನೆ
ಸಮಸ್ತಲೋಕ ವಂದಿತೆ ಸಂತತ ಮತ್ತೆ
ತಾಮಸ e್ಞನ ಹರತೆ ಸಾಮಗಾಯನ ಪ್ರೀತೆ ಸಕಲವಿದ್ಯಾತೀತೆ
ರೋಮ ರೋಮ ಗುಣ ಭರಿತೆ
ರಾಮನ್ನ ಪದ ನಾಮವನ್ನು
ನಾ ಮರೆಯದಂತೆ ನೀ ಮನಸು ಕೊಡು
ಹೇಮಾಂಬರೆ ಕಾಂಚಿದಾಮೆ ಅಮಮ ನಿ-
ಸ್ಸೀಮ ಮಹಿಮೆ ಭಕ್ತಸ್ತೋಮ ವನಧಿ ಸೋಮೆ
ಕಾಮ ಜನನಿ ತ್ರಿಧಾಮೆ ಪುಣ್ಯನಾಮೆ
ಕೋಮಲಾಂಗಿ ಸತ್ಯಭಾಮೆ ರಮೆ ಪೂರ್ಣ
ಕಾಮೆ ಸುರಸಾರ್ವಭೌಮೆ ||1||
ಚಂದನ ಗಂಧಲೇಪಿನೀ ಚತುರವಾಣೀ
ಮಂದಹಾಸಗಮನೀ
ಗಂಧಕಸ್ತೂರಿ ಜಾಣಿ ಗಂಭೀರ ಗುಣಶ್ರೇಣಿ
ಸಿಂಧುತನಯೇ ಕಲ್ಯಾಣಿ
ಇಂದಿರೆ ಪದ್ಮಮಂದಿರೆ ಕಂಬು
ಕಂಧರೆ ಸರ್ವಸುಂದರೆ ಮಾಯೆ
ಬಂದೆನು ಕರುಣದಲಿಂದ ನೋಡು ಶತ -
ಕಂಧರರಿಪು ಸುಖಸಾಂದ್ರ ನಿರಾಮಯೆ
ಹಿಂದಣ ಕಲ್ಮಷ ವೃಂದಗಳೋಡಿಸಿ
ಇಂದು ದೈನ್ಯದಲಿ ಬಂದು ಮರೆಬಿದ್ದು
ನಿಂದೆ ನಮೋನಮೋ ಯೆಂದೆ ||2||
ಘನ್ನ ಲಕ್ಷಣ ಪ್ರತಾಪೆ ನಿತ್ಯ ಸಲ್ಲಾಪೆ
ಅನ್ನಂತಾನಂತ ರೂಪೆ
ಸನ್ನುತಜನ ಸಾಮೀಪೆ ಸಕಲ ಪಾಪ ನಿರ್ಲೇಪೆ
ಕನ್ಯಾಮಣಿಯೆನಿಪೆ ನಿನ್ನ ಕಡೆಗಣ್ಣಿನ ನೋಟ-
ವನ್ನು ಹರಹಿ ಹಿರಣ್ಯಗರ್ಭಾದಿ-
ಯನ್ನು ಅನುದಿನ ಧನ್ಯನ ಮಾಳ್ಪಳೆ
ಅನ್ಯರಿಗೆ ಕಾರ್ಪಣ್ಯ ಬಡದಂತೆ
ಚನ್ನ ವಿಜಯವಿಠ್ಠಲನ್ನ ಪೂಜಿಪ ಗುರು
ರನ್ನೆ ಪುರಂದರರನ್ನ ಪೊಂದಿಸು ಸಂ-ಪನ್ನೆ ಯೆನ್ನ ಪ್ರಾಸನ್ನೆ ||3||