ಬರಿದೆ ಕರೆಯೆ ನೀ ಬಾರದಿರುವೆ
Category: ಶ್ರೀಕೃಷ್ಣ
ಬರಿದೆ ಕರೆಯೆ ನೀ ಬಾರದಿರುವೆ
ಪರಮ ಪ್ರೇಮದಿಂ ಕರೆದರೆ ಬರುವೆ ||
ತಿಳಿತಿಳಿದು ನಿನ್ನ ಕರೆಯದೆ ಉಳಿದೆ
ಇಳೆಯ ಆಟದಲಿ ಮೈಮರೆತೆ |
ಕಳೆಯೈ ಮೋಹದ ಆವರಣವ ನೀ
ಬೆಳಕ ತೋರೊ ಹರಿ ಕರುಣಾಜಲಧೇ ||
ಕನಕಪರಿಣವೀ ಭುವನ ವಿರಚನೆ
ಕನಸು ಸಾಕೋ ಕೃಷ್ಣ ಕೈಮುಗಿವೆ |
ದಿನಕರನುದಯಕೆ ವನಜವಿಕಸನ
ಮನವರಳಿಸೊ ಹರಿ ಪರಮಗುಣನಿಧೇ ||