ಬರಿದೆ ಹೋಯಿತು
Category: ಶ್ರೀಕೃಷ್ಣ
Author: ಪುರಂದರದಾಸ
ಬರಿದೆ ಹೋಯಿತು ಹೋಯಿತು ಹೊತ್ತು |
ನರಜನ್ಮಸ್ಥಿರವೆಂದು ನಾನಿದ್ದನೊ ರಂಗ ||
ಆಸೆ ಎಂಬುದು ಎನ್ನ ಕೇಶಪಡಿಸುತಿದೆ
ಗಾಸಿಯಾದೆನೊ ಹರಿ ನಾರಾಯಣ |
ವಾಸುದೇವನೆ ನಿನ್ನ ಧ್ಯಾನವ ಮಾಡದೆ
ನಾಶವಾಯಿತು ಜನ್ಮ ಮೋಸಹೋದೆನು ಕೃಷ್ಣ ||
ಪರರ ಸೇವೆಯ ಮಾಡಿ ಪರರನ್ನೆ ಕೊಂಡಾಡಿ
ಮರುಳುತನದಲಿ ಮತಿಹೀನನಾದೆ |
ನೆರೆ ನಂಬಿದೆನೊ ನಿನ್ನ ಕರುಣದಿಂದಲಿ ಎನ್ನ
ಮರೆಯದೆ ಸಲಹಯ್ಯ ಪುರಂದರವಿಟ್ಠಲ ||