ಸೇರಿದೆ ನಿನ್ನ ವೆಂಕಟರನ್ನ ಪಾಲಿಸು ಎನ್ನ
Category: ಶ್ರೀಕೃಷ್ಣ
Author: ವಿಜಯದಾಸ
ಸೇರಿದೆ ನಿನ್ನ ವೆಂಕಟರನ್ನ ಪಾಲಿಸು ಎನ್ನ
ಪಾರ ಜನುಮಕ್ಕೆ ನೀನೆ ದೈವವೆಂದು
ಶೂನ್ಯಜ್ಞನು ನಾನು ಅನ್ಯಾಥಾ ಗತಿ ಅರಿಯೆ |
ಅನ್ಯರಲ್ಲಿಗೆ ಕೊಡದೆ ಧನ್ಯನ ಮಾಡೊ ಬಿಡದೆ ||1||
ಕಲ್ಪತರುವೆ ಎಂದು ವಪ್ಪದಿಂದಲಿ ಬಂದೆ |
ಆಲ್ಪರಿಯದಂತೆ ನಾಗತಲ್ಪನೆ ಫಲವೀಯೋ ||2||
ವರುಷಾವರುಷ ಹೀಗೆ ದರುಶನಕೊಡು ಎನಗೆ |
ಹರುಷವಾಗಲಿ ಪರಮಪುರುಷ ವಿಜಯವಿಠ್ಠಲಾ ||3||