ಹದಿನಾಲ್ಕು ಲೋಕವನಾಳುವ ತಂದೆಗೆ
Category: ಶ್ರೀಕೃಷ್ಣ
Author: ವಿಜಯದಾಸ
ಹದಿನಾಲ್ಕು ಲೋಕವನಾಳುವ ತಂದೆಗೆ |
ಮುದದಿಂದ ನಾನೊಬ್ಬ ಭಾರವಾದೆನೆ
ಸುರಗಿರಿಯು ಶರಧಿಯೊಳು ಕಡೆವಾಗ ಮುಣಗಲಾ ||
ಭರದಿಂದ ಪೋಗಿ ಚೆನ್ನಾಂತು ಪೊತ್ತೆ ||
ಧರಣಿಯು ಮೊರೆಯಿಡಲು ತೆರಳಲ್ಲಿ ಬಂದು |
ಭೂತರುಣಿಯನು ಸೆರೆಬಡಿಸಿ ಉಳುಹಿಕೊಳ್ಳಲಿಲ್ಲವೆ ||1||
ಸುರಪತಿ ಮುನಿದೇಳು ಹಗಲಿರುಳು ಮಳೆಗರೆಯೆ |
ಬೆರಳಲಿ ಧರಿಸಿ ಕಾಯ್ದು ನಿಜದೆ ||
ವರಮುನಿ ಪಸವನು ಬೇಡಲಾಗಿ ಬೆದರಿ ನರ- |
ನರಸಿ ನಿನ್ನ ಕರೆಯೆ ಕರುಣದಲಿ ಪಾಲಿಸಿದೆ ||2||
ಜಲಜಾಕ್ಷ ಬೆಟ್ಟವನು ಪೊತ್ತು ಬಳಲಿದಾಗ |
ಸಲಹಬೇಕೆಂದು ಬೇಸರಿಸಲಿಲ್ಲಾ ||
ಸುಲಭದಲಿ ಶೇಷಾಚಲನಾಗಿಪ್ಪ |
ಒಲಿದೆನ್ನ ಸಂರಕ್ಷಿಸೊ ವಿಜಯವಿಠ್ಠಲನೆ ||3||