ಹರೇ ವಿಠ್ಠಲಾ ಪಾಂಡುರಂಗ

Category: ಶ್ರೀಕೃಷ್ಣ

Author: ವಿಜಯದಾಸ

ಹರೇ ವಿಠ್ಠಲಾ ಪಾಂಡುರಂಗ
ಪರಿಪಾಲಯ ಕಂಸಾರೆ
ಕರಕಮಲದ್ವಯ ಕಟಿಯ ಮ್ಯಾಲೆಯಿಟ್ಟ |
ಪರಮ ಪುರುಷ ಶೌರೇ ಮುರಾರೇ

ಜಲಜಭವಾದಿ ಸುರಸನ್ನುತ ಪಾದ ಜಲಜನಾಭನಾದ
ಕಲುಷ ದೂರ ಕರುಣಾಕರ ರಂಗ
ಸುಲಲಿತ ಮಹಿಮ ಹರೇ ಮುರಾರೆ ||1||

ಪುಂಡಲೀಕ ವರದಾತ ಮುಕುಂದ ಕುಂಡಲಿಶಯನ ಹರೇ |
ಅಂಡಜವಾಹನ ಅಪ್ರಾಕೃತಕಾಯ
ಕುಂಡಲಧರ ಹರೇ ಮುರಾರೇ ||2||

ದಿಟ್ಟತನದಿ ಹರಿಭಕ್ತ ಕೊಟ್ಟ ಇಟ್ಟಿಗಿ ಮೇಲೆ ನಿಂದ ದೇವ
ಸೃಷ್ಟಿಗೊಡೆಯ ಶ್ರೀ ವಿಜಯವಿಠ್ಠಲ
ದುಷ್ಟಕುಲಾಂತಕನೇ ಶ್ರೀ ಕೃಷ್ಣ ||3||