ಅಂಗ ಕ್ರಿಯಾಲಿಂಗವ ವೇಧಿಸಿ,

Category: ವಚನಗಳು

Author: ಅಕ್ಕಮಹಾದೇವಿ

ಅಂಗ ಕ್ರಿಯಾಲಿಂಗವ ವೇಧಿಸಿ,
ಅಂಗ ಲಿಂಗದೊಳಗಾಯಿತ್ತು.||1||

ಮನ ಅರಿವ ಬೆರಸಿ, ಜಂಗಮ ಸೇವೆಯ ಮಾಡಿ,
ಮನ ಜಂಗಮಲಿಂಗದೊಳಗಾಯಿತ್ತು.||2||

ಭಾವ ಗುರುಲಿಂಗದೊಳಗೆ ಬೆರಸಿ, ಮಹಾಪ್ರಸಾದವ ಭೋಗಿಸಿ,
ಭಾವ ಗುರುಲಿಂಗದೊಳಗಾಯಿತ್ತು.||3||

ಚೆನ್ನಮಲ್ಲಿಕಾರ್ಜುನಾ,
ನಿಮ್ಮ ಒಲುಮೆಯಿಂದ ಸಂದಳಿದು
ಸ್ವಯಲಿಂಗಿಯಾದೆನಯ್ಯಾ ಪ್ರಭುವೆ||4||