ಅಯ್ಯಾ, ನಿಮ್ಮ ಶರಣರ ಕೂಡಿದ
Category: ವಚನಗಳು
Author: ಅಕ್ಕಮಹಾದೇವಿ
ಅಯ್ಯಾ, ನಿಮ್ಮ ಶರಣರ ಕೂಡಿದ
ಸುಖವನುಪಮೆಗೆ ತರಬಾರದಯ್ಯಾ.
ಅಯ್ಯಾ, ನಿಮ್ಮ ಮಹಂತರ ಕೂಡಿ ಅಗಲುವ ಧಾವತಿಗಿಂತ
ಸಾವುದೇ ಕರಲೇಸಯ್ಯಾ.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮನರುಹಿದ ಮಹಿಮರನಗಲಿಆನು ನಿಲ್ಲಲಾರೆನಯ್ಯಾ.
Author: ಅಕ್ಕಮಹಾದೇವಿ
ಅಯ್ಯಾ, ನಿಮ್ಮ ಶರಣರ ಕೂಡಿದ
ಸುಖವನುಪಮೆಗೆ ತರಬಾರದಯ್ಯಾ.
ಅಯ್ಯಾ, ನಿಮ್ಮ ಮಹಂತರ ಕೂಡಿ ಅಗಲುವ ಧಾವತಿಗಿಂತ
ಸಾವುದೇ ಕರಲೇಸಯ್ಯಾ.
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮನರುಹಿದ ಮಹಿಮರನಗಲಿಆನು ನಿಲ್ಲಲಾರೆನಯ್ಯಾ.