ಅಯ್ಯಾ, ನಿಮ್ಮ ಶರಣರ ಬರವಿಂಗೆ
Category: ವಚನಗಳು
Author: ಅಕ್ಕಮಹಾದೇವಿ
ಅಯ್ಯಾ, ನಿಮ್ಮ ಶರಣರ ಬರವಿಂಗೆ
ಗುಡಿ ತೋರಣವ ಕಟ್ಟುವೆ.
ಅಯ್ಯಾ, ನಿಮ್ಮ ಶರಣರ ಬರವಿಂಗೆ
ಮುಡುಹಿನಲ್ಲಿ ಪಟ್ಟವ ಕಟ್ಟುವೆ.
ಅಯ್ಯಾ, ನಿಮ್ಮ ಶರಣರೆನ್ನ ಮನೆಗೆ ಬಂದಡೆ,
ಅವರ ಶ್ರೀಪಾದವನೆನ್ನ ಹೃದಯದಲ್ಲಿ ಬಗೆದಿಟ್ಟುಕೊಂಬೆ,ಕಾಣಾ ಚೆನ್ನಮಲ್ಲಿಕಾರ್ಜುನಾ.