ಬಾರಯ್ಯ ರಂಗ

Category: ಶ್ರೀಕೃಷ್ಣ

Author: ಪುರಂದರದಾಸ

ಬಾರಯ್ಯ ರಂಗ ಬಾರಯ್ಯ ಕೃಷ್ಣ
ಬಾರಯ್ಯ ಸ್ವಾಮಿ ಬಾರಯ್ಯ ||

ವಾರಣಭಯವ ನಿವಾರಣ ಮಾಡಿದ
ಕಾರುಣ್ಯನಿಧಿ ಎನ್ನ ಹೃದಯಮಂದಿರಕೆ ||

ಇಂದೆನ್ನ ಪೂರ್ವಪಾಪಂಗಳ ಕಳೆದು
ಮುಂದೆನ್ನ ಜನ್ಮ ಸಫಲವ ಗೈದು |
ತಂದೆ ಶ್ರೀ ಪುರಂದರವಿಟ್ಠಲಾ ನೀನೊಲಿದು
ಎಂದೆಂದಿಗಾನಂದ ಸುಖವನು ಸುರಿದು ||