ಅಂದೂ ನೀನೆ, ಇಂದೂ ನೀನೆ

Category: ವಚನಗಳು

Author: ಅಕ್ಕಮಹಾದೇವಿ

ಅಂದೂ ನೀನೆ, ಇಂದೂ ನೀನೆ, ಏಂದೂ ನೀನೆ, ಕೇಳಾ ತಂದೆ.
ನಿನ್ನ ಬೆಂಬಳಿವಿಡಿದ ಹಳೆಮಗಳಾನಯ್ಯ

ಅಂದೂ ಇಂದೂ ಎಂದೂ ನಿನ್ನ ನಂಬಿದ ಒಲವಿನ ಶಿಶು ನಾನಯ್ಯ.
ಒಂದಲ್ಲದೆ ಎರಡಯೆನಯ್ಯಾ.
ಎನ್ನ ತಂದೆ ಕೇಳಾ, ಚೆನ್ನಮಲ್ಲಿಕಾರ್ಜುನಾನಿಮ್ಮ ಎಂಜಲನುಂಬ ಹಳೆಯವಳಾನಯ್ಯಾ.