ಬಾ ಶ್ರೀಗುರುದೇವನೆ ಬಾ

Category: ಶ್ರೀಗುರು

Author: ಕುವೆಂಪು

ಬಾ ಶ್ರೀಗುರುದೇವನೆ ಬಾ |

ಶ್ಯಾಮಲ ಕಾನನ ಶೃಂಗ ತರಂಗಿತ
ಸಹ್ಯಾದ್ರಿಯ ಸುಂದರ ಮಂದಿರಕೆ
ಚಿನ್ಮಯ ಮಮ ಹೃನ್ಮಂದಿರಕೆ ||

ವಂಗಮಾತೆಯಲಿ ಜನ್ಮವನೆತ್ತಿ
ದಿವ್ಯಸಮನ್ವಯ ಧರ್ಮವ ಬಿತ್ತಿ
ಮತಭೇದದ ವಿಷವನು ಹೋಗಾಡಿ
ಲೋಕದ ದೃಷ್ಟಿಗೆ ಸಮತೆಯ ನೀಡಿ
ಕಾಪಾಡಿದ ಪಾವನ ಮೂರುತಿಯೇ ||

ಹೇ ನವಯುಗದವತಾರ
ಪೂರ್ವದಿಗಂತದಿ ಕಾಂತಿಯು ಮೂಡಿ
ನಾಡಿನ ಕತ್ತಲೆಯನು ಹೋಗಾಡಿ
ಮೈದೋರುವ ತೆರದಲಿ ನೀನಿಂದು
ನಮ್ಮೀ ವನಗೃಹಕೈತಂದು
ನಮ್ಮೆದೆಗತ್ತಲ ಪರಿಹರಿಸಿ
ಸುಖಶಾಂತಿಯ ಕಾಂತಿಯ ಬರಿಸಿ
ಕೃಪಗೈ, ಓ ಮಮ ದೀನಬಂಧು ||