ಅಸನದಿಂದ ಕುದಿದು,
Category: ವಚನಗಳು
Author: ಅಕ್ಕಮಹಾದೇವಿ
ಅಸನದಿಂದ ಕುದಿದು,
ವ್ಯಸನದಿಂದ ಬೆಂದು,
ಅತಿ ಆಸೆಯಿಂದ ಬಳಲಿ,
ವಿಷಯಕ್ಕೆ ಹರಿವ ಜೀವಿಗಳು ನಿಮ್ಮನರಿಯರು.
ಕಾಲಕಲ್ಪಿತ ಪ್ರಳಯ ಜೀವಿಗಳೆಲ್ಲನಿಮ್ಮನೆತ್ತ ಬಲ್ಲರಯ್ಯ ಚೆನ್ನಮಲ್ಲಿಕಾರ್ಜುನಾ ?
Author: ಅಕ್ಕಮಹಾದೇವಿ
ಅಸನದಿಂದ ಕುದಿದು,
ವ್ಯಸನದಿಂದ ಬೆಂದು,
ಅತಿ ಆಸೆಯಿಂದ ಬಳಲಿ,
ವಿಷಯಕ್ಕೆ ಹರಿವ ಜೀವಿಗಳು ನಿಮ್ಮನರಿಯರು.
ಕಾಲಕಲ್ಪಿತ ಪ್ರಳಯ ಜೀವಿಗಳೆಲ್ಲನಿಮ್ಮನೆತ್ತ ಬಲ್ಲರಯ್ಯ ಚೆನ್ನಮಲ್ಲಿಕಾರ್ಜುನಾ ?