ಬುದ್ಧ ಚಂದ್ರೋದಯದಿ
Category: ಭಗವಾನ್ ಬುದ್ಧ
Author: ಪ್ರಭುಶಂಕರ
ಬುದ್ಧಚಂದ್ರೋದಯದಿ
ಹಿಗ್ಗಿ ನಮ್ಮೆದೆ ಕಡಲು
ಶಾಂತಿ ಶೀಕರವನಿದೋ ಚೆಲ್ಲುತಿಹುದು
ಜಗವ ಗೆಲ್ಲುತಿಹುದು ||
ನೂರು ಸಾಸಿರ ದಳದ
ಬುದ್ಧಪದ್ಮವು ಅರಳೆ
ಭಕುತಭೃಂಗವು ಬಂದು ಮುತ್ತುತಿಹುದು
ಸುತ್ತ ಸುತ್ತುತಿಹುದು ||
ಜ್ವಾಲೆ ಮೇಲುದ ಹೊದೆದು
ಅಗ್ನಿದೇವನೆ ನಡೆದು
ಕರ್ಮಕಾನನವನ್ನು ದಹಿಸಲೆಂದು
ನಡೆದು ಬರುವನಿಂದು ||