ಇದನಾರಯ್ಯ ಬಲ್ಲರು

Category: ವಚನಗಳು

Author: ಅಕ್ಕಮಹಾದೇವಿ

ಇದನಾರಯ್ಯ ಬಲ್ಲರು
ಹಮ್ಮಳಿದ ಶರಣರ ಮೇಲಿಹ ಪರವ ಬಲ್ಲ ಶರಣ.
ಪಂಚೇಂದ್ರಿಯದ ಇಂಗಿತವ ಬಲ್ಲ ಶರಣ.
ಒಡಲ ಬಿಟ್ಟ ಶರಣನಲ್ಲದೆ, ಉಳಿದ ಪ್ರಾಣಘಾತಕ ಪಾತಕರಿವರೆತ್ತಲು,
ಶ್ರೀಶೈಲ ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣ ಬಸವಣ್ಣಂಗಲ್ಲದೆ.